ಪರಮಾಣು ಜಲಾಂತರ್ಗಾಮಿ ನೌಕೆ ಅಪಘಾತ: ಆಕ್ಸಿಜನ್‌ ಸಿಗದೇ 55 ನಾವಿಕರ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೀನಾದ ಪರಮಾಣು ಜಲಾಂತರ್ಗಾಮಿ ನೌಕೆಗಳು ಸರಣಿ ಅಪಘಾತಗಳನ್ನು ಎದುರಿಸುತ್ತಿವೆ. ಆಗಸ್ಟ್ 21 ರಂದು, ಚೀನಾದ ಪರಮಾಣು ಜಲಾಂತರ್ಗಾಮಿ ಅಪಘಾತಕ್ಕೊಳಗಾದ ಬಳಿಕ ಇದೀಗ ಮತ್ತೊಂದು ಪರಮಾಣು ಜಲಾಂತರ್ಗಾಮಿ ನೌಕೆ ಕೂಡ ಅಪಘಾತಕ್ಕೀಡಾಗಿರುವುದಾಗಿ ಬ್ರಿಟಿಷ್ ಪತ್ರಿಕೆ ಡೈಲಿ ಮೇಲ್ ವರದಿ ಮಾಡಿದೆ.

ಚೀನಾದ ಮುಖ್ಯ ಭೂಭಾಗ ಹಾಗೂ ಕೊರಿಯನ್‌ ಪರ್ಯಾದ ದ್ವೀಪದ ನಡುವಿನ ಹಳದಿ ಸಮುದ್ರದಲ್ಲಿ ಬ್ರಿಟಿಷ್ ಹಡಗುಗಳನ್ನು ಬಲೆಗೆ ಬೀಳಿಸಲು ಚೀನಾ ಪರಮಾಣು ಜಲಾಂತರ್ಗಾಮಿ ನೌಕೆಯನ್ನು ಸ್ಥಾಪಿಸಿದೆ. ಆದರೆ ಈ ಪರಮಾಣು ಜಲಾಂತರ್ಗಾಮಿ ನೌಕೆಯಲ್ಲಿ ಆಮ್ಲಜನಕ ವೈಫಲ್ಯಗಳಿಂದ ಪರಮಾಣು ಜಲಾಂತರ್ಗಾಮಿ ಅಪಘಾತಕ್ಕೆ ಒಳಗಾಗಿ ಅದರಲ್ಲಿದ್ದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) 55 ನಾವಿಕರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ.

ಚೀನಾದ PLA ನೇವಿ ಸಬ್‌ಮೆರಿನ್ ‘093-417’ ನ ಕ್ಯಾಪ್ಟನ್ ಮತ್ತು 21 ಇತರ ಅಧಿಕಾರಿಗಳು ಮೃತಪಟ್ಟವರಲ್ಲಿ ಸೇರಿದ್ದಾರೆ. ಆದರೆ ಚೀನಾ ಇನ್ನೂ ಅಧಿಕೃತವಾಗಿ ಈ ಎರಡು ಅಪಘಾತಗಳನ್ನು ಅಧಿಕೃತವಾಗಿ ಘೋಷಿಸಲಾಗಿಲ್ಲ. ಅಲ್ಲದೆ ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ನಿರಾಕರಿಸಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!