ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಫ್ರಿಕಾದ ಅಗ್ರ ಫುಟ್ಬಾಲ್ ಪಂದ್ಯಾವಳಿಯ ವೇಳೆ ಕ್ರೀಡಾಂಗಣದ ಹೊರಗೆ ಸಂಭವಿಸಿದ ನೂಕು ನುಗ್ಗಲಿನಿಂದ ಆದ ಕಾಲ್ತುಳಿತಕ್ಕೆ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ.
ರಾಜಧಾನಿ ಯೌಂಡಿ ನಲ್ಲಿನ ಒಲೆಂಬೆ ಕ್ರೀಡಾಂಗಣದಲ್ಲಿ ಪಂದ್ಯಾವಳಿ ಆಯೋಜಿಸಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಬಹುದು ಎಂದು ಗವರ್ನರ್ ನಾಸೆರಿ ಪಾಲ್ ಬಿಯಾ ತಿಳಿಸಿದ್ದಾರೆ.
ಕೊರೋನಾ ಭೀತಿಯಿಂದ ಕೇವಲ 60 ಸಾವಿರ ಸಾಮರ್ಥ್ಯ ಸೀಮಿತಗೊಳಿಸಲಾಗಿತ್ತು. ಆದರೆ ಹೆಚ್ಚಿನ ಜನಸಮೂಹ ಸೇರಿದ ಕಾರಣ ನೂಕುನುಗ್ಗಲು ಸಂಭವಿಸಿದ್ದು, ಕಾಲ್ತುಳಿತಕ್ಕೆ 6 ಮಂದಿ ಮೃತಪಟ್ಟಿದ್ದಾರೆ.
ಈ ಘಟನೆ ಕುರಿತು ಆಫ್ರಿಕನ್ ಫುಟ್ಭಾಲ್ ಒಕ್ಕೂಟ ತನಿಖೆ ನಡೆಸಲು ಮುಂದಾಗಿದ್ದು, ಹೆಚ್ಚುನ ಮಾಹಿತಿ ಪಡೆಯಲು ಸೂಚಿಸಿದೆ.