ಸೇತುವೆಯಿಂದ 50 ಅಡಿ ಕೆಳಕ್ಕೆ ಬಿದ್ದ ಕಾರು: ಏಳು ವೈದ್ಯಕೀಯ ವಿದ್ಯಾರ್ಥಿಗಳ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೇತುವೆ ಮೇಲಿಂದ ಕಾರು 50 ಅಡಿ ಕೆಳಗೆ ಬಿದ್ದು ಅಪಘಾತವಾಗಿದ್ದು, ಏಳು ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ವಾರ್ಧಾದಲ್ಲಿ ನಿನ್ನೆ ತಡರಾತ್ರಿ ಅಪಘಾತ ಸಂಭವಿಸಿದೆ. ಸೆಲ್ಸುರಾ ಹಳ್ಳಿಯ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳಿಗೆ ಕಾರಿಗೆ ಕಾಡು ಪ್ರಾಣಿಯೊಂದು ಅಡ್ಡಿಯಾಗಿದೆ.
ಅದನ್ನು ತಪ್ಪಿಸುವ ಸಲುವಾಗಿ ಬಲವಾಗಿ ಕಾರು ತಿರುಗಿಸಲಾಗಿದೆ. ಆಗ ಅಲ್ಲಿಯೇ ಇದ್ದ ಸೇತುವೆಗೆ ಕಾರು ಡಿಕ್ಕಿ ಹೊಡೆದು, ಕೆಳಗಿನ ಮೋರಿಗೆ ಬಿದ್ದಿದೆ. ಕಾರು ಸಂಪೂರ್ಣ ಜಖಂ ಆಗಿದ್ದು, ಕಾರಿನಲ್ಲಿದ್ದ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಏಳು ವಿದ್ಯಾರ್ಥಿಗಳಲ್ಲಿ ಒಬ್ಬಾತನ ಜನ್ಮದಿನ ಆಚರಿಸಲು ಹೋಗಿದ್ದರು. ಪಾರ್ಟಿ ಮುಗಿಸಿ ಬರುವಾಗ ಅಪಘಾತ ಸಂಭವಿಸಿದೆ. ತಿರೋರಾ ವಿಧಾನಸಭಾ ಕ್ಷೇತ್ರದ ಶಾಸಕ ವಿಜಯ್ ಭರತ್‌ಲಾಲ್ ರಹಂಗ್‌ಡೇಲ್ರ ಪುತ್ರ ಆವಿಷ್ಕಾರ್ ಹಾಗೂ ನೀರಜ್ ಚವನ್, ನಿತೇಶ್ ಸಿಂಗ್, ವಿವೇಕ್ ನಂದನ್, ಪ್ರತ್ಯುಷ್ ಸಿಂಗ್, ಶುಭಂ ಜೈಸ್ವಾಲ್, ಪವನ್ ಶಕ್ತಿ ಮೃತರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!