ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಟ್ಟ ಬಾಲಕನೊಬ್ಬ ತನ್ನ ತಾಯಿಗೆ ಬರೆದಿರುವ ಸಂದೇಶದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋವನ್ನು ಶೆಮಾಟಾಲಜಿಸ್ಟ್, ಎಂಡಿ ಅವರ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಪ್ರೀತಿಯ ಅಮ್ಮ.. “ನೀವು ತುಂಬಾ ಕಷ್ಟಕರವಾದ ದಿನವನ್ನು ಹೊಂದಿದ್ದರೆ ನನ್ನನ್ನು ಕ್ಷಮಿಸಿ, ”ಎಂದು ಆರು ವರ್ಷದ ಬಾಲಕ ಬರೆದಿದ್ದಾನೆ. ಈ ಟಿಪ್ಪಣಿಯನ್ನು ಜೀವನ ಪರ್ಯಂತ ತನ್ನ ಬಳಿ ಇಟ್ಟುಕೊಳ್ಳುತ್ತೇನೆ ಎಂದು ತಾಯಿ ಹೇಳಿದ್ದಾರೆ. ಈ ಫೋಟೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಕೂಡಲೇ ವೈರಲ್ ಆಗಿದೆ. ತಾಯಿಯ ಕಷ್ಟವನ್ನು ಮಕ್ಕಳು ಗುರುತಿಸುವುದೇ ಅಪರೂಪ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಇಂತಹ ಮಗುವಿಗೆ ಜನ್ಮ ನೀಡುವ ತಾಯಿ ಅದೃಷ್ಟವಂತರು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಮಗುವಿನಿಂದ ಇಂತಹ ಕಾಮೆಂಟ್ ಅಪರೂಪ ಎಂಬ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಬ್ಬ ತಾಯಿ ತನ್ನ ಮಕ್ಕಳಿಗಾಗಿ ಪ್ರತಿದಿನ ಸಾಕಷ್ಟು ಕಷ್ಟಗಳು ಮತ್ತು ತ್ಯಾಗಗಳನ್ನು ಮಾಡುತ್ತಾಳೆ. ಅಂತಹ ತಾಯಿಯ ಹೃದಯವನ್ನು ನೋಯಿಸಬಾರದು ಎಂದು ವ್ಯಕ್ತಿಯೊಬ್ಬರು ಉಲ್ಲೇಖಿಸಿದ್ದಾರೆ.
Just found this note from 6 and I will be keeping it until I die. pic.twitter.com/6qm0Fa2NOu
— Shematologist, MD (@acweyand) February 7, 2023