ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೇ ದಿನಗಳ ಹಿಂದೆ ಸುದೀಪ್ ಡಿಕೆ.ಶಿವಕುಮಾರ್, ನಲಪಾಡ್ ಅವರನ್ನು ಭೇಟಿ ಮಾಡಿದ್ದು, ಫೋಟೊಗಳು ವೈರಲ್ ಆಗಿತ್ತು.
ಸುದೀಪ್ ಕಾಂಗ್ರೆಸ್ ಸೇರಿಬಿಡ್ತಾರೆ ಎಂದು ಭಾವಿಸಲಾಗಿತ್ತು. ಇದೀಗ ಈ ಬಗ್ಗೆ ಸುದೀಪ್ ಮೌನ ಮುರಿದಿದ್ದು, ಪಕ್ಷಕ್ಕೆ ಸೇರೋ ಬಗ್ಗೆ ಮಾತನಾಡೋದಕ್ಕೆ ಅವರು ಬಂದಿದ್ರು, ಮಾತನಾಡಿದ್ದೇವೆ. ಆದರೆ ರಾಜಕೀಯಕ್ಕೆ ಬರ‍್ತೀನಾ? ಯಾವ ಪಕ್ಷಕ್ಕೆ ಸೇರಬೇಕು ಅನ್ನೋ ನಿರ್ಧಾರ ಮಾಡಿಲ್ಲ.
ಬಸವರಾಜ ಬೊಮ್ಮಾಯಿ, ರಮ್ಯಾ, ಸುಧಾಕರ್, ಡಿಕೆ ಶಿವಕುಮಾರ್ ಇವರೆಲ್ಲರೂ ನನ್ನ ಸ್ನೇಹಿತರೇ, ಬೇರೆ ಬೇರೆ ಪಾರ್ಟಿಯಲ್ಲಿ ಆತ್ಮೀಯರೇ ಇರುವಾಗ ಏನು ಮಾಡಬೇಕು ಗೊತ್ತಿಲ್ಲ, ನನ್ನ ನಿರ್ಧಾರ ಮಾಡಿಲ್ಲ ಎಂದಿದ್ದಾರೆ. ಬದಲಾವಣೆ ತರೋಕೆ ಪವರ್ ಬೇಕಂತ ಇಲ್ಲ, ಹಾಗೆಯೂ ಮಾಡಬಹುದು ಉತ್ತಮ ನಿರ್ಧಾರ ತಗೊಳ್ತೇನೆ ಎಂದಿದ್ದಾರೆ.