ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆಯಲ್ಲಿವೆ ವಾರಸುದಾರರಿಲ್ಲದ 63 ವಾಹನಗಳು !

ದಿಗಂತ ವರದಿ ಮೈಸೂರು:

ನಗರದ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾದ ರಸ್ತೆ ಅಪಘಾತ ಪ್ರಕರಣಗಳಲ್ಲಿ ಇನ್ಸೂರೆನ್ಸ್ ಇಲ್ಲದೇ ಇರುವ ಒಟ್ಟು 63 ವಿವಿಧ ಮಾದರಿಯ ವಾಹನಗಳಿವೆ.
ಈ ವಾಹನಗಳನ್ನು ವಶ ಪಡಿಸಿಕೊಂಡಿದ್ದು, ಸದರಿ ಪ್ರಕರಣಗಳಲ್ಲಿ ಘನ ನ್ಯಾಯಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿ, ಪ್ರಕರಣಗಳು ನ್ಯಾಯಾಲಯದ ವಿಚಾರಣೆ ಹಂತದಲ್ಲಿದೆ.
ಸದರಿ ವಾಹನಗಳನ್ನು ಪೊಲೀಸ್ ವಶಕ್ಕೆ ಪಡೆದು 90 ದಿನಗಳ ಅವಧಿ ಮೀರಿದ್ದು, ಇಲ್ಲಿಯವರೆಗೂ ವಾಹನಗಳನ್ನು ಮಾಲೀಕರು,ವಾರಸುದಾರರು ತಮ್ಮ ಸ್ವಾಧೀನಕ್ಕೆ ಪಡೆದಿಲ್ಲ. ಈ ವಾಹನಗಳು ಠಾಣಾ ಆವರಣದಲ್ಲಿ ಬಿಸಿಲು, ಮಳೆ, ಚಳಿ ಮತ್ತು ಗಾಳಿಗೆ ಹಾಳಾಗುತ್ತಿದ್ದು, ವಾಹನಗಳ ಮೌಲ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಸದರಿ ವಾಹನಗಳ ಮಾಲೀಕರು, ವಾರಸುದಾರರು ಈ ಕೂಡಲೇ ಸಂಬAಧಪಟ್ಟ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ವಾಹನವನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳಲು ಕೋರಲಾಗಿದೆ. ಇಲ್ಲವಾದಲ್ಲಿ ವಾಹನಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗುವುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!