75ನೇ ಸ್ವಾತಂತ್ರ್ಯೋತ್ಸವ: ಅತಿಥಿಯಾಗಿ ಅಮೆರಿಕದ ಹಾಡುಗಾರ್ತಿ ಮೇರಿ ಮಿಲಾಬೆನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದ 75ನೇ ಸ್ವಾತಂತ್ರ್ಯೋತ್ಸವಕ್ಕೆ ಅತಿಥಿಯಾಗಿ ಆಫ್ರಿಕ ಮೂಲದ ಅಮೆರಿಕದ ಹಾಡುಗಾರ್ತಿ ಮೇರಿ ಮಿಲಾಬೆನ್‌ ಅವರು ಆಗಮಿಸಲಿದ್ದಾರೆ.

ರಾಷ್ಟ್ರಗೀತೆ ‘ಜನ ಗಣ ಮನ’ ಮತ್ತು ಭಕ್ತಿ ಗೀತೆ ‘ಓಂ ಜೈ ಜಗದೀಶ್‌ ಹರೇ’ ಗೀತೆಗಳ ಮೂಲಕ ಪರಿಚಿತರಾಗಿರುವ ಮಿಲಾಬೆನ್‌ ಭಾರತೀಯ ಸಾಂಸ್ಕೃತಿಕ ಸಂಬಂಧಿ ಕೌನ್ಸಿಲ್‌ (ಐಸಿಸಿಆರ್‌) ಅತಿಥಿಯಾಗಿ ಆಹ್ವಾನಿಸಿದೆ.

ಮಿಲಾಬೆನ್‌ ಅವರು ಸ್ವಾತಂತ್ರ್ಯೋತ್ಸವಕ್ಕೆ ಐಸಿಸಿಆರ್‌ ಆಹ್ವಾನಿಸುತ್ತಿರುವ ಮೊದಲ ಅಮೆರಿಕದ ಕಲಾವಿದೆಯಾಗಿದ್ದಾರೆ. 40 ವರ್ಷದ ಮಿಲಾಬೆನ್‌ ಅವರು ಅಮೆರಿಕವನ್ನು ಪ್ರತಿನಿಧಿಸುತ್ತಿರುವ ಅಧಿಕೃತ ಅತಿಥಿಯಾಗಿದ್ದಾರೆ.

1959ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಡಾ. ಮಾರ್ಟಿನ್‌ ಲೂಥರ್‌ ಕಿಂಗ್‌ ಅವರ ಸ್ಮರಣಾರ್ಥ, 75ನೇ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿದೆ. ಅಮೆರಿಕದ ಸಾಂಸ್ಕೃತಿಕ ರಾಯಭಾರಿಯಾಗಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಮಿಲಾಬೆನ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವುದರಿಂದ ಅತ್ಯಂತ ಖುಷಿಯಾಗಿದ್ದೇನೆ. ಬೇರೆ ರಾಷ್ಟ್ರಗಳಿಗೆ ನಾನೊಬ್ಬ ಪ್ರವಾಸಿಯಾಗಿ ಹೋಗಬಹುದು, ಆದರೆ ಭಾರತಕ್ಕೆ ನಾನು ಯಾತ್ರಾರ್ಥಿಯಾಗಿ ಬಂದಿದ್ದೇನೆ ಎಂಬ ಮಾರ್ಟಿನ್‌ ಲೂಥರ್‌ ಮಾತುಗಳು ನೆನಪಾಗುತ್ತಿವೆ ಎಂದು ಮಿಲಾಬೆನ್‌ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!