ತೂಕ ಕಳೆದುಕೊಳ್ಳುವವರಿಗೆ ಟೇಸ್ಟಿ ಟೇಸ್ಟಿ ವೆಜ್‌ ರಾಗಿ ಸೂಪ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು: 
3 Tbs ರಾಗಿ ಹಿಟ್ಟು
1/4 ಕಪ್ ಕ್ಯಾರೆಟ್
1/4 ಕಪ್ ಕ್ಯಾಪ್ಸಿಕಂ
1/4 ಕಪ್ ಹಸಿರು ಬಟಾಣಿ
1/4 ಕಪ್ ಹೂಕೋಸು
1/4 ಕಪ್ ಟೊಮ್ಯಾಟೊ
1/4 ಕಪ್ ಈರುಳ್ಳಿ
3 ಹಸಿ ಮೆಣಸಿನಕಾಯಿ
ಉಪ್ಪು ರುಚಿಗೆ ತಕ್ಕಷ್ಟು
1/2 ಟೀಸ್ಪೂನ್ ಪೆಪ್ಪರ್ ಪೌಡರ್
5 ರಿಂದ 6 ಎಸಳು ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಮೂರು ಕಪ್‌ ನೀರು ಹಾಕಿ ಚೆನ್ನಾಗಿ ಕುದಿಸಿ ಅದರೊಳಗೆ ಮೇಲೆ ನೀಡಿರುವ ಎಲ್ಲಾ ತರಕಾರಿ ಹಾಕಿ ಚೆನ್ನಾಗಿ ಬೇಯಿಸಿ, ರಾಗಿ ಹಿಟ್ಟಿಗೆ ಸ್ವಲ್ಪ ನೀರು ಬೆರೆಸಿ ಉಂಡೆ ಇಲ್ಲದಂತೆ ಕಲಸಿಕೊಂಡು ತರಕಾರಿ ಬೇಯುತ್ತಿರುವ ಪಾತ್ರೆಗೆ ಹಾಕಿ ಮತ್ತೆ ಸ್ವಲ್ಪ ಗಟ್ಟಿಯಾಗುವವರಿಗೆ ಕುದಿಸಿ. ಗಟ್ಟಿಯಾದ ಕೂಡಲೇ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೊನೆಗೆ ಕೊತ್ತಂಬರಿ ಸೊಪ್ಪು, ಅಗತ್ಯವಿದ್ದರೆ ನಿಂಬೆ ರಸ ಹಿಂಡಿ ಕೆಳಗಿಳಿಸಿ ಕುಡಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!