ಅಮೆರಿಕದಲ್ಲಿ ಮಗು ಸೇರಿ ನಾಲ್ವರು ಭಾರತೀಯರನ್ನು ಅಪಹರಿಸಿದ ಶಸ್ತ್ರಸಜ್ಜಿತ ಗುಂಪು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಮೆರಿಕದ ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿ ಪ್ರದೇಶದಿಂದ  8 ತಿಂಗಳ ಹೆಣ್ಣು ಮಗು ಮತ್ತು ಆಕೆಯ ಪೋಷಕರು ಸೇರಿದಂತೆ ನಾಲ್ವರು ಭಾರತೀಯರನ್ನು ಅಪಹರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
36 ವರ್ಷದ ಜಸ್ದೀಪ್ ಸಿಂಗ್, 27 ವರ್ಷದ ಜಸ್ಲೀನ್ ಕೌರ್, ಅವರ ಎಂಟು ತಿಂಗಳ ಮಗು ಅರೂಹಿ ಧೇರಿ ಮತ್ತು 39 ವರ್ಷದ ಅಮನ್‌ದೀಪ್ ಸಿಂಗ್ ಅವರನ್ನು ದುಷ್ಕರ್ಮಿಗಳು ಕರೆದೊಯ್ದಿದ್ದಾರೆ ಎಂದು ಮರ್ಸಿಡ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ. ಅಪಹರಣಾಕಾರರು ಶಸ್ತ್ರಸಜ್ಜಿತ ಹಾಗೂ ಅಪಾಯಕಾರಿಯಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ತನಿಖೆ ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಲಾಗಿಲ್ಲ. ಮರ್ಸಿಡ್ ಕೌಂಟಿ ಪ್ರದೇಶದ ದಕ್ಷಿಣ ಹೆದ್ದಾರಿ ಸಮೀಪದಲ್ಲಿ ನಾಲ್ವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಅಪಹರನಕಾರರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜನರು ಶಂಕಿತರು ಅಥವಾ ಸಂತ್ರಸ್ತರು ಕಂಡರೆ 911 ಗೆ ಕರೆ ಮಾಡಿ ಎಂದು ಅಧಿಕಾರಿಗಳು ಕೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!