Saturday, December 10, 2022

Latest Posts

ನಟಿ ಶ್ರೀಲೀಲಾ ತಾಯಿಗೆ ಮತ್ತೆ ಸಂಕಷ್ಟ: ಪತ್ನಿ ವಿರು​ದ್ಧ ದೂರು ಕೊಟ್ಟ ಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಮಿಂಚುತ್ತಿರುವ ಖ್ಯಾತ ನಟಿ ಶ್ರೀಲೀಲಾ ಅವರ ತಾಯಿ ವಿಚಾರದಲ್ಲಿ ಮತ್ತೆ ಕಿರಿಕ್​ ಆಗಿದ್ದು, ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.

ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ವಿರುದ್ಧ ಪತಿ ಸುಭಾಕರ್ ರಾವ್ ದೂರು ನೀಡಿದ್ದಾರೆ. ನನ್ನ ಮನೆ ಬೀಗ ಒಡೆದು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಆಡುಗೋಡಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ನಟಿ ಶ್ರೀಲೀಲಾ ಪೋಷಕರ ನಡುವಿನ ವಿಚ್ಛೇದನ ಅರ್ಜಿ ನ್ಯಾಯಾಲಯದಲ್ಲಿದೆ. ಈ ದಂಪತಿ 20 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಬೆಂಗಳೂರಿನ ಕೋರಮಂಗಲದ ಅಪಾರ್ಟ್​​​ಮೆಂಟ್ ​​ಒಂದರಲ್ಲಿ ಪತಿ ಸುಭಾಕರ್ ರಾವ್ ಅವರ ಫ್ಲ್ಯಾಟ್ ಇದೆ. ಅದನ್ನು ಸ್ವರ್ಣಲತಾಗೆ ಸುಭಾಕರ್ ಅವರೇ ನೀಡಿದ್ದರು. ಆದರೆ, ಇಬ್ಬರ ನಡುವೆ ಮನಸ್ತಾಪ ಆದ ಹಿನ್ನೆಲೆ ಆ ಫ್ಲ್ಯಾಟ್​ಗೆ ಸುಧಾಕರ್ ಬೀಗ ಹಾಕಿದ್ದರು. ಅಕ್ಟೋಬರ್​ 3ರಂದು ಸ್ವರ್ಣಲತಾ ಅವರು ಬೀಗ ಒಡೆದು ಫ್ಲ್ಯಾಟ್​ಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು​ ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.
ಅಲಯನ್ಸ್ ವಿಶ್ವವಿದ್ಯಾಲಯದ ವಿವಾದಕ್ಕೆ ಸಂಬಂಧಿಸಿದಂತೆ ಆನೇಕಲ್ ಪೊಲೀಸರು ಸ್ವರ್ಣಲತಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆಕೆಯನ್ನು ಪ್ರಕರಣದಲ್ಲಿ ಎರಡನೇ ಆರೋಪಿ ಎಂದು ಹೆಸರಿಸಲಾಗಿದ್ದು, ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!