ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಡಾನ್‌ನಲ್ಲಿ ಸೇನಾ ಸಂಘರ್ಷಕ್ಕೆ 200 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗುಂಡಿನ ಚಕಮಕಿ, ಶೆಲ್ ದಾಳಿಯಿಂದ ಜನರು ಭಯಭೀತರಾಗಿದ್ದು, ಸುಡಾನ್ ಸೇನೆ ಹಾಗೂ ಅರೆ ಸೇನಾಪಡೆ 24 ಗಂಟೆ ಕದನವಿರಾಮ ಘೋಷಿಸಿದೆ.
ಮಂಗಳವಾರ ಸಂಜೆಯಿಂದಲೇ ಕದನ ವಿರಾಮ ಘೋಷಿಸಿದ್ದು, ಸಾಕಷ್ಟು ಜನರು ರಾಜಧಾನಿಯಿಂದ ಸುರಕ್ಷಿತ ಜಾಗಕ್ಕೆ ಗುಳೆ ಹೊರಟಿದೆ. ಗುಂಡಿನ ದಾಳಿಯ ಭೀತಿಗೆ ಜನ ಮನೆಯಲ್ಲೇ ಅಡಗಿ ಕುಳಿತಿದ್ದರು. ವಿರಾಮ ಘೋಷಣೆಯಾಗುತ್ತಿದ್ದಂತೆಯೇ ಜನ ಲಗೇಜು ಸಮೇತ ತರಾತುರಿಯಲ್ಲಿ ಊರು ಬಿಡುವ ದೃಶ್ಯ ಸಾಮಾನ್ಯವಾಗಿತ್ತು.
ರಾಜಧಾನಿ ಖಾರ್ಟೂಮ್ ಮತ್ತು ಇತರ ನಗರಗಳಲ್ಲಿ ಗುಂಡಿನ ದಾಳಿ ಹಾಗೂ ಸ್ಫೋಟಕ್ಕೆ ಮೃತರ ಸಂಖ್ಯೆ 200ಕ್ಕೆ ಏರಿಕೆಯಾಗಿದೆ. ಇನ್ನು ಗಾಯಗೊಂಡಿರುವ 1,800 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.