ಶಾಲಾ ಬಸ್- ಟ್ರಕ್ ನಡುವೆ ರಸ್ತೆ ಅಪಘಾತ: 8 ವರ್ಷದ ಬಾಲಕಿ, ವ್ಯಕ್ತಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಂಜಾಬ್‌ ನ ತರ್ನ್ ತರಣ್-ಗೋಯಿಂಡ್ವಾಲ್ ಸಾಹಿಬ್ ರಸ್ತೆಯ ಶೇಖ್ ಚಾಕ್ ಗ್ರಾಮದ ಬಳಿ ಶನಿವಾರ ಟಿಪ್ಪರ್ ಟ್ರಕ್ ಹಾಗೂ ಶಾಲಾ ಬಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಎಂಟು ವರ್ಷದ ಬಾಲಕಿ ಮತ್ತು ಶಾಲಾ ಬಸ್‌ ಚಾಲಕ ಸಾವನ್ನಪ್ಪಿದ್ದಾರೆ.
ಬೆಳಗ್ಗೆ 7.15ಕ್ಕೆ ಬಸ್‌ನಲ್ಲಿ 15 ಮಕ್ಕಳನ್ನು ಉಸ್ಮಾ ಗ್ರಾಮದ ಮೈ ಭಾಗೋ ಅಂತರಾಷ್ಟ್ರೀಯ ಶಾಲೆಗೆ ಕರೆದೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ. ಮಿಗ್ಲಾನಿ ಗ್ರಾಮದ ವಿದ್ಯಾರ್ಥಿನಿ ಸಿರತ್‌ಪಾಲ್ ಕೌರ್ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ವಿದ್ಯಾರ್ಥಿ ಜೋರಾವರ್ ಸಿಂಗ್ (6) ಅವರನ್ನು ಗುರುನಾನಕ್ ದೇವ್ ಮಲ್ಟಿ-ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಚಾಲಕನನ್ನು ರಶಿಯಾನ ಗ್ರಾಮದ ರಣಧೀರ್ ಸಿಂಗ್ ಎಂದು ಗುರುತಿಸಲಾಗಿದೆ. ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಮತ್ತು ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಕ್ಕಿ ಪರಿಣಾಮ ಬಸ್ ಪಲ್ಟಿಯಾಗಿದೆ. ಶಾಲಾ ಆಡಳಿತದ ಪ್ರಕಾರ, ಅಮೃತಸರ-ಭಟಿಂಡಾ ಹೆದ್ದಾರಿಯಲ್ಲಿ ಟೋಲ್ ತೆರಿಗೆ ಪಾವತಿಸುವುದನ್ನು ತಪ್ಪಿಸಲು ಟ್ರಕ್ ಚಾಲಕರು ಉಸ್ಮಾ ಗ್ರಾಮದ ಲಿಂಕ್ ರಸ್ತೆಯನ್ನು ಬಳಸುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!