80ಕೆ.ಜಿ. ಅಕ್ರಮ ಗೋಮಾಂಸ ಸಾಗಾಟ ; ಪೊಲೀಸರ ವಶ

ಹೊಸದಿಗಂತ ವರದಿ ಮಡಿಕೇರಿ :

ಕಾರೊಂದರಲ್ಲಿ ಸಾಗಾಟವಾಗುತ್ತಿದ್ದ 80 ಕೆ.ಜಿ. ಗೋಮಾಂಸವನ್ನು ಸುಂಟಿಕೊಪ್ಪ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಕಾರಿನಲ್ಲಿ ಗೋಮಾಂಸ ಸಾಗಾಟವಾಗುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಕಾರು ಚಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ಮಾಂಸವನ್ನು ಬೆಟ್ಟದಪುರದಿಂದ ಮಡಿಕೇರಿಗೆ ಸಾಗಿಸುತ್ತಿದ್ದುದಾಗಿ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಅಕ್ರಮ ಗೋಮಾಂಸ ಸಾಗಾಟ ಹಾಗೂ ಮಾರಾಟವಾಗುತ್ತಿರುವ ಬಗ್ಗೆ ಹಿಂದೂ ಪರ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!