ಮೋದಿ ಸರ್ಕಾರ ದೇಶದಲ್ಲಿ ಪ್ರತಿವರ್ಷ 10 ಲಕ್ಷ ಉದ್ಯೋಗ ನೀಡುವ ಗುರಿ: ಖೂಬಾ

ಹೊಸದಿಗಂತ ವರದಿ ಹುಬ್ಬಳ್ಳಿ:

ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಸರ್ಕಾರ ದೇಶದಲ್ಲಿ ಪ್ರತಿವರ್ಷ 10 ಲಕ್ಷ ಉದ್ಯೋಗ ನೀಡುವ ಗುರಿ ಹೊಂದಿದ್ದು, ಮೂರು ತಿಂಗಳಲ್ಲಿ 2.18 ಲಕ್ಷ ಉದ್ಯೋಗ ಯುವಕ ಯುವತಿಯರಿಗೆ ನೀಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ಶುಕ್ರವಾರ ಇಲ್ಲಿಯ ವಿದ್ಯಾನಗರದ ಬಿವಿಬಿ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಕಾಲೇಜಿನ ಬಯೋಟೆಕ್ ಭವನದಲ್ಲಿ ಏರ್ಪಡಿಸಿದ್ದ ಉದ್ಯೋಗಿಗಳಿಗೆ ನೇಮಕ ಪತ್ರ ನೀಡುವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ಎಂಟು ವರ್ಷದಲ್ಲಿ ಪ್ರಧಾನಿ ಮೋದಿಯವರು ಇತಿಹಾಸ ನಿರ್ಮಾಣದ ಕಾರ್ಯ ಮಾಡಲಾಗಿದ್ದು, ಇದಕ್ಕೆ ನಾವೇಲ್ಲ ಸಾಕ್ಷಿಯಾಗಿದ್ದೇವೆ. ದೇಶದ ಸುಸಜ್ಜಿತ ಆರ್ಥಿಕ ವ್ಯವಸ್ಥೆ, ರಕ್ಷಣೆ, ಯೋಜನೆಗಳ ಸಶಕ್ತಿಕರಣ ಮಾಡಿದ್ದಾರೆ. ಪ್ರಸ್ತುತ ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿ ಹಿನ್ನೆಡೆಯಾಗಿದ್ದು, ಆದರೆ ದೇಶದ ಅರ್ಥವ್ಯವಸ್ಥೆ ಸದೃಢವಾಗಿದೆ. ಅನೇಕ ದೇಶಗಳು ಭಾರತವನ್ನು‌ ಕೊಂಡಾಡುವಂತಾಗಿದೆ ಎಂದರು.

ಆತ್ಮ‌ ನಿರ್ಭರ ಭಾರತ, ಮೇಕ್‌ ಇನ್ ಇಂಡಿಯಾ, ಸ್ವದೇಶಿ ಲಸಿಕೆಗೆ ಯಾವ ದೇಶಗಳು ಸರಿಸಾಟಿ ಇಲ್ಲದಾಗಿವೆ. ದೇಶದ ಯುವಜನತೆ ಹೊಸ ಸ್ಟಾಟ್೯ಪ್ ಆರಂಭಿಸುವ ಮೂಲಕ ಇನ್ನಿತರಿಗೂ ಉದ್ಯೋಗ ನೀಡುವ ಸಾಮಥ್ರ್ಯ ಹೊಂದಿದ್ದಾರೆ. ಚೀನಾದ ಬಳಿಕ ಭಾರತವನ್ನು ಎಲ್ಲ ದೇಶಗಳು ನೋಡುತ್ತಿವೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಡರ ಮಾತನಾಡಿ, ಪ್ರಧಾನಿ‌ ಮೋದಿಯವರ ಆಡಳಿತದಿಂದ ದೇಶದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯಾಗುತ್ತಿದೆ. ದೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ 1 ಕೋಟಿ ಉದ್ಯೋಗ ಸೃಷ್ಟಿಯಾಗಿವೆ ಎಂದರು.

206 ಉದ್ಯೋಗಿಗಳಿಗೆ ಉದ್ಯೋಗ ನೇಮಕ ಪತ್ರ :
ಸದ್ಯ ಈ ಮೇಳದಲ್ಲಿ 206 ಯುವಕರಿಗೆ ಉದ್ಯೋಗ ನೇಮಕ ಪತ್ರ ನೀಡಲಾಗುತ್ತಿದೆ. ಈ ಎಲ್ಲ ಉದ್ಯೋಗಿಗಳ ಆಯ್ಕೆ ಪಾರದರ್ಶಕವಾಗಿ ಹಣ ಪಡೆಯದೆ, ಶಿಫಾರಸ್ಸು ಹಾಗೂ ಯಾವುದೇ ಒಂದು ಕಪ್ಪು ಚುಕ್ಕೆಯಿಲ್ಲದೆ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!