ELECTION 2023 | ರಾಜ್ಯಾದ್ಯಂತ 80 ಸಾವಿರ ಮಂದಿ ಮನೆಯಿಂದಲೇ ಮತದಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿಯಿದ್ದು, ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಿದೆ.

ಇದಕ್ಕಾಗಿ ಚುನಾವಣಾ ಆಯೋಗ ಸಾಕಷ್ಟು ತಯಾರಿ ಮಾಡಿದ್ದು, 80 ವರ್ಷ ಮೇಲ್ಪಟ್ಟ 60 ಸಾವಿರ ಜನರು ಮತ್ತು 20 ಸಾವಿರ ವಿಶೇಷಚೇತನರು ಮನೆಯಿಂದಲೇ ಮತ ಚಲಾಯಿಸಲು ಅರ್ಜಿ ಸಲ್ಲಿಸಿದ್ದಾರೆ.

ಮನೆಯಿಂದಲೇ ಮತದಾನಕ್ಕೆ ಅರ್ಜಿಗಳು ಸಲ್ಲಿಕೆಯಾಗಿದ್ದು, ಚುನಾವಣಾಧಿಕಾರಿಗಳು ಇದನ್ನು ಪರಿಶೀಲಿಸುತ್ತಾರೆ. ನಂತರ ಮತದಾನಕ್ಕೆ ಬೇಕಾದ ಸೌಲಭ್ಯ ಕಲ್ಪಿಸುತ್ತಾರೆ.

2023 ರ ಮಾರ್ಚ್‌ವರೆಗಿನ ಮತದಾರರ ಪಟ್ಟಿ ಪ್ರಕಾರ ರಾಜ್ಯದಲ್ಲಿ 12.2 ಲಕ್ಷ ಜನರು 80 ವರ್ಷದವರಿದ್ದಾರೆ. 5.6 ಲಕ್ಷ ಮಂದಿ ವಿಶೇಷಚೇತನರಿದ್ದಾರೆ. 16,000 ಕ್ಕೂ ಹೆಚ್ಚು ಶತಾಯುಷಿಗಳಿದ್ದಾರೆ. ಆದರೆ ಇವರಲ್ಲಿ ಶೇ.5 ರಷ್ಟು ಜನ ಮಾತ್ರ ಮನೆಯಿಂದಲೇ ಮತದಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!