ಭಾರತೀಯ ಚಾನೆಲ್‌ಗಳನ್ನು ಪ್ರಸಾರ ಮಾಡಬೇಡಿ, ಕೇಬಲ್ ಆಪರೇಟರ್‌ಗಳಿಗೆ ಪಾಕ್ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಾನೆಲ್‌ಗಳನ್ನು ಪ್ರಸಾರ ಮಾಡುವುದು ಬೇಡ ಎಂದು ಕೇಬಲ್ ಆಪರೇಟರ್‌ಗಳಿಗೆ ಪಾಕ್ ಎಚ್ಚರಿಕೆ ನೀಡಿದೆ. ಪ್ರಸಾರ ನಿಲ್ಲಿಸುವಂತೆ ಪಾಕಿಸ್ತಾನದ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ದೇಶಾದ್ಯಂತ ಸ್ಥಳೀಯ ಕೇಬಲ್ ಟಿವಿ ಆಪರೇಟರ್‌ಗಳಿಗೆ ಆದೇಶ ನೀಡಿದೆ.

ಆದೇಶ ಉಲ್ಲಂಘನೆಯಾದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆಯೂ ಕೇಬಲ್ ಆಪರೇಟರ್‌ಗಳು ಸಾಕಷ್ಟು ನಿಯಮಗಳನ್ನು ಉಲ್ಲಂಘಿಸಿದಿದ್ದಾರೆ. ಇದು ಮುಂದುವರಿದರೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ನಿಯಂತ್ರಣ ಪ್ರಾಧಿಕಾರಿ ಪರವಾನಗಿ ನೀಡಿದ ಚಾನೆಲ್‌ಗಳನ್ನು ಹೊರತುಪಡಿಸಿ ಇನ್ಯಾವುದೇ ಚಾನೆಲ್‌ನ್ನು ಪ್ರಸಾರ ಮಾಡುವಂತಿಲ್ಲ. ಸಾಕಷ್ಟು ಕೇಬಲ್ ಆಪರೇಟರ್‌ಗಳ ಮೇಲೆ ದಾಳಿ ನಡೆದಿದ್ದು, ಅಕ್ರಮವಾಗಿ ಅಳವಡಿಸಲಾಗಿದ್ದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 1965 ರ ಯುದ್ಧದ ನಂತರ ಭಾರತೀಯ  ಚಲನಚಿತ್ರಗಳನ್ನು ಮೊದಲ ಬಾರಿಗೆ ನಿಷೇಧ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!