ಜಿಯಾ ಖಾನ್ ಸಾವಿನ ಪ್ರಕರಣ: 10 ವರ್ಷದ ಬಳಿಕ ತೀರ್ಪು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಜಿಯಾ ಖಾನ್ ಸಾವಿನ ಪ್ರಕರಣದ ತೀರ್ಪು ಇಂದು ಬರಲಿದೆ. ಬಾಲಿವುಡ್‌ನಲ್ಲಿ ಮಿಂಚಿ ಮೆರೆಯಬೇಕಿದ್ದ ಜಿಯಾಖಾನ್ 2013 ರಲ್ಲಿ ಏಕಾಏಕಿ ಮೃತಪಟ್ಟಿದ್ದರು. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ಸುದೀರ್ಘ ತನಿಖೆಯಾಗಿದ್ದು, ಇದೀಗ ಈ ಕೇಸ್ ಸಂಬಂಧಿತ ತೀರ್ಪು ಹೊರಬರಲಿದೆ.

ಜಿಯಾ ಖಾನ್ ಮೃತಪಟ್ಟು 10 ವರ್ಷಗಳು ಕಳೆದ ನಂತರ ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ನೀಡುತ್ತಿದೆ. ಏ.20ರಂದು ಜಿಯಾ ಖಾನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಅಂತಿಮ ವಿಚಾರಣೆ ನಡೆದಿದ್ದು, ನ್ಯಾಯಾಲಯ ತೀರ್ಪು ಕಾದಿರಿಸಿದೆ. ಏ.28 ರಂದು ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸೂರಜ್ ಪಾಂಚೋಲಿ ಭವಿಷ್ಯ ಏನಾಗಲಿದೆ ಎಂದು ತಿಳಿಯಲಿದೆ.

ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ಪ್ರಶಸ್ತಿಗಳನ್ನು ಪಡೆದಿದ್ದ ಜಿಯಾಖಾನ್ ಏಕಾಏಕಿ ಅಪಾ ರ್ಟ್‌ಮೆಂಟ್‌ನಲ್ಲಿ ಮೃತದೇಹ ನೇಣು ಬಿಗಿದು ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿತ್ತು. ಇಡೀ ಚಿತ್ರರಂಗ, ಕುಟುಂಬದವರಿಗೆ ಆಘಾತವುಂಟು ಮಾಡಿತ್ತು. ಪ್ರಥಮ ತನಿಖೆಯಿಂದ ಇದು ಆತ್ಮಹತ್ಯೆ ಎಂದು ತಿಳಿದುಬಂದಿತ್ತು. ಆದರೆ ಜಿಯಾ ಕುಟುಂಬ ಇದನ್ನು ಒಪ್ಪದೆ ಜಿಯಾ ಸಾವಿಗೆ ಸೂರಜ್ ಕಾರಣ ಎಂದು ಹೇಳಿದ್ದರು.

ಸೂರಜ್ ಹಾಗೂ ಜಿಯಾ ಪ್ರೀತಿಸುತ್ತಿದ್ದು, ಡೆತ್‌ನೋಟ್‌ನಲ್ಲಿ ಜಿಯಾ ಅನುಭವಿಸಿದ ಕಷ್ಟಗಳನ್ನು ಬರೆದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!