ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ 824 ಕಿಮೀ ಮೆಟ್ರೋ ರೈಲು ಜಾಲ, 1,039 ಕಿಮೀ ನಿರ್ಮಾಣ ಹಂತದಲ್ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದಲ್ಲಿ ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಮೆಟ್ರೋ ರೈಲು ಜಾಲದ ಉದ್ದ 824 ಕಿಲೋಮೀಟರ್‌ಗಳಷ್ಟಿದ್ದು ಮತ್ತು ಇನ್ನೂ 1,039 ಕಿಲೋಮೀಟರ್‌ಗಳ ಕೆಲಸ ನಿರ್ಮಾಣ ಹಂತದಲ್ಲಿದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

“ನಗರ ಸಾರಿಗೆ ವ್ಯವಸ್ಥೆಯಾದ ಮೆಟ್ರೋ ರೈಲು ಜಾಲು 2002 ರಲ್ಲಿ ಶೂನ್ಯದಿಂದ 824 ಕಿಲೋಮೀಟರ್‌ಗಳಷ್ಟು ಕಾರ್ಯಾಚರಣೆಯಲ್ಲಿದೆ. ಇನ್ನೂ 1,039 ಕಿಲೋಮೀಟರ್ ನಿರ್ಮಾಣ ಹಂತದಲ್ಲಿದೆ. ಇದು ವೇಗವಾಗಿ ವಿಸ್ತರಿಸುತ್ತಿದೆ” ಎಂದು ಅವರು ಪ್ರಶ್ನೋತ್ತರ ಸಮಯದಲ್ಲಿ ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

“ನಾವು ಈಗಾಗಲೇ ಅತಿದೊಡ್ಡ ಮೆಟ್ರೋ ಆಪರೇಟರ್‌ಗಳಲ್ಲಿ ಒಬ್ಬರಾಗಿದ್ದೇವೆ. ನಾವು ವಿಶ್ವದ ಎರಡನೇ ಅತಿದೊಡ್ಡ ಮೆಟ್ರೋ ಆಪರೇಟರ್ ಆಗುವ ಸಮಯ ಬರುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಸಚಿವರು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!