Wednesday, February 1, 2023

Latest Posts

ಡಿ.18 ರಂದು ಬೆಂಗಳೂರಿನಲ್ಲಿ ಬಿಜೆಪಿ ಪ್ರಕೋಷ್ಟಗಳ ಬೃಹತ್ ಸಮಾವೇಶ: ಜಯತೀರ್ಥ ಕಟ್ಟಿ

ಹೊಸದಿಗಂತ ವರದಿ ವಿಜಯಪುರ:
ಬರುವ ಡಿ.18 ರಂದು ಬೆಂಗಳೂರಿನಲ್ಲಿ ಬಿಜೆಪಿ ಪ್ರಕೋಷ್ಟಗಳ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪ್ರಕೋಷ್ಟಗಳ ಸಹ ಸಂಯೋಜಕ ಜಯತೀರ್ಥ ಕಟ್ಟಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ವಿವಿಧ 24 ಪ್ರಕೋಷ್ಟಗಳಿದ್ದು, ಎಲ್ಲ ಪ್ರಕೋಷ್ಟಗಳು ಸೇರಿ 50 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ‌‌. ಈ ಎಲ್ಲರನ್ನೂ ಸೇರಿಸುವ ಉದ್ದೇಶದಿಂದ ಶಕ್ತಿ ಸಂಗಮದ ಹೆಸರಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸಚಿವ ಅಶ್ವಿನಿ ವಷ್ಣವಿ ಉದ್ಘಾಟನೆ ನೆರವೇರಿಸುವರು. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭಾಗವಹಿಸುವರು. ಬಿ.ಎಲ್. ಸಂತೋಷ ಸಮಾರೋಪ ಭಾಷಣೆ ಮಾಡುವರು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ಡಿ.15 ರಂದು ರಾಜ್ಯದ 10 ಬಿಜೆಪಿ
ಜಿಲ್ಲಾ ಕಾರ್ಯಾಲಯಗಳ ಉದ್ಘಾಟನೆ ನೆರವೇರಲಿವೆ ಎಂದರು. ರಾಷ್ಟ್ರೀಯ ನಾಯಕ ಜೆ.ಪಿ.ನಡ್ಡಾ ಅವರು ವರ್ಚ್ಯುಯಲ್ ಮೂಲಕ ಉದ್ಘಾಟನೆ ನೆರವೇರಿಸುವರು. ಭೈರತಿ ಬಸವರಾಜ ಹಾಗೂ ವೈದ್ಯಕೀಯ ಸಚಿವ ಸಿ. ಅಶ್ವತ್ಥನಾರಾಯಣ ಪಾಲ್ಗೊಳ್ಳುವರು ಎಂದರು.
ಬಿಜೆಪಿ ಮುಖಂಡ ಚಂದ್ರಶೇಖರ ಕವಟಗಿ, ಡಾ. ಬಾಬು ರಾಜೇಂದ್ರ ನಾಯಕ, ಸುರೇಶ ಬಿರಾದಾರ, ಸಂಜಯ ಪಾಟೀಲ ಕನಮಡಿ, ಗುರುಲಿಂಗಪ್ಪ ಅಂಗಡಿ, ಡಾ. ಮಹೇಶ ನಾಲವಾಡ, ರವಿ, ವೀರೇಶ ಸಂಗಳದ, ಶಿವರುದ್ರ ಬಾಗಲಕೋಟ, ವಿಜಯ ಜೋಶಿ, ರಾಕೇಶ್ ಕುಲಕರ್ಣಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!