SCAM | ಆನ್‌ಲೈನ್‌ನಲ್ಲಿ ಹಣ ಇನ್ವೆಸ್ಟ್‌ ಮಾಡಿ ಬರೋಬ್ಬರಿ 91ಲಕ್ಷ ರೂ. ಕಳೆದುಕೊಂಡ ಶಿಕ್ಷಕಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಖಾಸಗಿ ಶಿಕ್ಷಕನಿಗೆ ವಂಚಕರು ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಗಳಿಸಬಹುದೆಂದು ಆಸೆ ತೋರಿಸಿ ಬರೋಬ್ಬರಿಗೆ 91.90 ಲಕ್ಷ ರೂ. ವಂಚಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಶಿಕ್ಷಕ ವಾಟ್ಸಾಪ್ ನೋಡುವಾಗ ಎನ್‌ಜಿಸಿ ವೆಬ್ ಸೈಟ್ ಲಿಂಕ್ ಬಂದಿದ್ದು, ಅದನ್ನು ಕ್ಲಿಕ್ ಮಾಡಿದಾಗ ಇದು ಅಮೆರಿಕಾ ಟ್ರೇಡಿಂಗ್ ಮತ್ತು ಮೈನಿಂಗ್ ಕಂಪನಿ ಎಂದು ತಿಳಿಸಿ ಶಿಕ್ಷಕನಿಂದ ದಾಖಲೆಗಳನ್ನು ಪಡೆದು ರಿಜಿಸ್ಟರ್ ಮಾಡಿಸಿಕೊಂಡಿತು.

ನಂತರ ಖಾತೆ ತೆರೆದು, ಲಾಭಾಂಶದ ಆಸೆ ತೋರಿಸಿ ಹಂತ ಹಂತವಾಗಿ ಹಣ ಹಾಕಿಸಿಕೊಂಡಿದ್ದಾರೆ. ಶಿಕ್ಷಕ ಹಣ ಹಾಕಿದ ನಂತರ ಖಾತೆಯಿಂದ 27.40 ಲಕ್ಷ ರೂ. ಹಣವನ್ನು ಬಿಡಿಸಿಕೊಳ್ಳಲು ಹೋದಾಗ ನಿಮ್ಮ ಖಾತೆ ಲಾಕ್ ಆಗಿದ್ದು, 27.40 ಲಕ್ಷ ರೂ. ಎಕ್ಸ್ಚೇಂಜ್ ಫ್ರೀ ಹೇಳಿದ್ದರಿಂದ ಶಿಕ್ಷಕನಿಗೆ ಹಣವನ್ನು ತುಂಬುವಂತೆ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಿದ್ದಾರೆ.

ನಂತರ ನಿಮ್ಮ ಅಕೌಂಟ್‌ನಲ್ಲಿ ಲಾಭಾಂಶ ಸೇರಿ ಒಟ್ಟು 2 ಕೋಟಿ ರೂ. ಹಣ ಇದ್ದು, ವಿತ್ ಡ್ರಾ ಮಾಡಬೇಕೆಂದರೆ ಮತ್ತೆ 47.29 ಲಕ್ಷ ರೂ. ಹಣವನ್ನು ಪಾವತಿಸಬೇಕು ಎಂದು ಮೆಸೇಜ್‌ನ್ನು ಕಳುಹಿಸಿದರು. ಆಗಲೂ ಕೂಡ ಶಿಕ್ಷಕ 2 ಕೋಟಿ ರೂ ಹಣ ಬರುತ್ತದೆ ಎಂದು ನಂಬಿದ್ದಾರೆ. ಹಣ ಬಾರದೇ ಇರುವುದರಿಂದ ಮೋಸ ಹೋಗಿರುವುದು ಗೊತ್ತಾಗಿದೆ.

ಯಾರೋ ಅಪರಿಚಿತ ವ್ಯಕ್ತಿಗಳು ಎನ್‌ಜಿಸಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುತ್ತೇನೆಂದು ನಂಬಿಸಿದ್ದಾರೆ. ನನ್ನ ಖಾತೆಯಿಂದ ಆನ್‌ಲೈನ್ ಮೂಲಕ ಹಂತ ಹಂತವಾಗಿ ಒಟ್ಟು 91 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!