Tuesday, March 28, 2023

Latest Posts

OSCAR| ‘ನಾಟು ನಾಟು’ ಹಾಡಿನ ಮೂಲಕ ಶುರುವಾಯ್ತು ಆಸ್ಕರ್‌ ಸಂಭ್ರಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಸಡಗರದಿಂದ ಆರಂಭವಾಗಿದೆ. 95ನೇ ಆಸ್ಕರ್ ಸಮಾರಂಭ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯುತ್ತಿದೆ. RRR ಸಿನಿಮಾದಿಂದ ರಾಜಮೌಳಿ, NTR, ಚರಣ್, ಸೆಂಥಿಲ್ ಕುಮಾರ್, ಕೀರವಾಣಿ, ಚಂದ್ರ ಬೋಸ್, ರಾಹುಲ್ ಭಾಗವಹಿಸಿದ್ದಾರೆ. ಇಂದು ಮುಂಜಾನೆ 5:30 ಕ್ಕೆ ಪ್ರಾರಂಭವಾದ ಈ ಕಾರ್ಯಕ್ರಮವು ಆರ್‌ಆರ್‌ಆರ್‌ನ ‘ನಾಟು ನಾಟು’ ಹಾಡಿನೊಂದಿಗೆ ಪ್ರಾರಂಭವಾಯಿತು.

ಎಂ.ಎಂ.ಕೀರವಾಣಿ ಸಂಗೀತ ಸಂಯೋಜನೆಯ ಈ ಹಾಡು ಇಡೀ ವಿಶ್ವದ ಮನ ಗೆದ್ದಿದೆ. ಅಲ್ಲದೇ ಈ ಹಾಡಿಗೆ ಎನ್ ಟಿಆರ್ ಹಾಗೂ ರಾಮ್ ಚರಣ್ ಹಾಕಿರುವ ಸ್ಟೆಪ್ಸ್ ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲರನ್ನೂ ಆಕರ್ಷಿಸಿದೆ. ಆಸ್ಕರ್ ಸಮಾರಂಭವು ಇಂದಿನಿಂದ ಪ್ರಾರಂಭವಾಗುತ್ತದೆ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿರುವ ಜಿಮ್ಮಿ ಕಿಮ್ಮೆಲ್ ಅವರು ಆಸ್ಕರ್ ಪ್ರಶಸ್ತಿಯ ಕುರಿತು ಮಾತನಾಡುತ್ತಾ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ನಾಟು ನಾಟು ಹಾಡಿಗೆ ನೃತ್ಯಗಾರರು ವೇದಿಕೆಯಲ್ಲಿ ನೃತ್ಯ ಮಾಡಿದರು. ಇದರೊಂದಿಗೆ ಆಸ್ಕರ್ ಸಮಾರಂಭ ಅಬ್ಬರದಿಂದ ಆರಂಭವಾಯಿತು.

ತೆಲುಗು ಹಾಡಿನೊಂದಿಗೆ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ ಆರಂಭವಾಗುತ್ತಿದ್ದಂತೆ ತೆಲುಗು ಪ್ರೇಕ್ಷಕರು ರಾಜಮೌಳಿ ಹಾಗೂ ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದರು. ಇನ್ನು ಈ ಹಾಡು ಆಸ್ಕರ್ ಪ್ರಶಸ್ತಿ ಗೆಲ್ಲುವುದೊಂದೇ ಬಾಕಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!