9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಪ್ರಾಚೀನ ಅಭ್ಯಾಸಕ್ಕೆ ಸಜ್ಜುಗೊಳಿಸೋಣ ಎಂದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ಇನ್ನು ಮೂರು ವಾರಗಳಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ (9th International Yoga Day) ನಡೆಯಲಿದ್ದು, ವಿಶ್ವವೇ ಯೋಗ ಆಚರಣೆಗೆ ಕಾಯುತ್ತಿದೆ .

ಈ ಕ್ಷಣ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಪ್ರಾಚೀನ ಅಭ್ಯಾಸಕ್ಕೆ ಸಜ್ಜುಗೊಳಿಸೋಣ ಎಂದು ಹೇಳೀದ್ದಾರೆ.

“ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಇನ್ನು ಕೇವಲ ಮೂರು ವಾರಗಳು ಮಾತ್ರ ಉಳಿದಿವೆ. ನಮ್ಮ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಹೆಚ್ಚಿಸುವ ಈ ಪ್ರಾಚೀನ ಅಭ್ಯಾಸಕ್ಕೆ ಸಜ್ಜುಗೊಳಿಸೋಣ ಮತ್ತು ಆಚರಿಸೋಣ. ನಾವು ಆರೋಗ್ಯಕರ ಮತ್ತು ಸಂತೋಷದ ಸಮಾಜವನ್ನು ರಚಿಸೋಣ” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

https://twitter.com/narendramodi/status/1663919625736798212?ref_src=twsrc%5Etfw%7Ctwcamp%5Etweetembed%7Ctwterm%5E1663919625736798212%7Ctwgr%5E168a21683b28957772f6d166b3f203a4191f0991%7Ctwcon%5Es1_&ref_url=https%3A%2F%2Ftv9kannada.com%2Fnational%2F9th-international-yoga-day-pm-narendra-modi-tweet-rks-591345.html

ಯೋಗ ದಿನದ ಬಗ್ಗೆ ಆಯುಷ್ ಇಲಾಖೆ ಕೂಡ ಟ್ವೀಟ್ ಮಾಡಿದ್ದು, “ದೊಡ್ಡ ಆಚರಣೆಗೆ 21 ದಿನಗಳು ಬಾಕಿ ಇವೆ. ಬನ್ನಿ ನಮ್ಮೊಂದಿಗೆ ಸೇರಿಕೊಳ್ಳಿ ಮತ್ತು 9 ನೇ ಯೋಗದಿನಾಚರಣೆ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಮ್ಮೊಂದಿಗೆ ಸಂಪರ್ಕದಲ್ಲಿರಿ” ಎಂದು ಹೇಳಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿವರ್ಷ ಥೀಮ್ ಒಂದನ್ನು ಇಟ್ಟು ಯೋಗ ದಿನವನ್ನು ಆಚರಿಸಲು ಆಚರಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!