Saturday, December 9, 2023

Latest Posts

ಸ್ಮೃತಿ ಇರಾನಿ ಮಿಸ್ಸಿಂಗ್ ಎಂದ ಕಾಂಗ್ರೆಸ್ ಗೆ ಯುಎಸ್ ಸಂಪರ್ಕಿಸಿ ಎಂದ ಕೇಂದ್ರ ಸಚಿವೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಬಿಜೆಪಿ ನಾಯಕ ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್ ಅನ್ನು ಹಂಚಿಕೊಂಡಿದೆ.

ಸ್ಮೃತಿ ಇರಾನಿ ಮತ್ತು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರ ಛಾಯಾಚಿತ್ರವನ್ನು ಪೋಸ್ಟ್ ಮಾಡಲಾಗಿದ್ದು, ಒಬ್ಬರು ಟ್ವೀಟ್‌ಗಳನ್ನು ಮರೆಮಾಚುತ್ತಾರೆ ಮತ್ತು ಇನ್ನೊಬ್ಬರು ಮಹಿಳಾ ಕುಸ್ತಿಪಟುಗಳ ಪ್ರಶ್ನೆಗಳಿಗೆ ಓಡಿಹೋಗುತ್ತಾರೆ ಎಂದು ಆರೋಪಿಸಿದೆ.

https://twitter.com/INCIndia/status/1663871752026374146?ref_src=twsrc%5Etfw%7Ctwcamp%5Etweetembed%7Ctwterm%5E1663871752026374146%7Ctwgr%5E4f001a7dcc3b271db11b7dddcb4f9f6ca50e3798%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Findia%3Fmode%3Dpwaaction%3Dclick

ಇನ್ನೂ ಕಾಂಗ್ರೆಸ್‌ನ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ ಅವರು, ಹೋ ದಿವ್ಯ ರಾಜಕೀಯ ಪ್ರಾಣಿಯೇ.. ನಾನು ಈಗಷ್ಟೇ ಅಮೇಥಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಲೋನ್ ವಿಧಾನಸಭಾ ಕ್ಷೇತ್ರ ಸಿರ್ಸೀರಾ ಗ್ರಾಮದಿಂದ ಧುರಾನ್‌ಪುರ ಕಡೆ ಹೊರಟಿದ್ದೇನೆ. ನೀವು ಮಾಜಿ ಸಂಸದರನ್ನು ಹುಡುಕುತ್ತಿದ್ದರೆ ಅಮೆರಿಕವನ್ನು ಸಂಪರ್ಕಿಸಿ ಎಂದು ಹಿಂದಿಯಲ್ಲಿ ಹೇಳಿದರು.

https://twitter.com/smritiirani/status/1663885792941604865?ref_src=twsrc%5Etfw%7Ctwcamp%5Etweetembed%7Ctwterm%5E1663885792941604865%7Ctwgr%5E4f001a7dcc3b271db11b7dddcb4f9f6ca50e3798%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Findia%3Fmode%3Dpwaaction%3Dclick

ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಏಪ್ರಿಲ್ 23 ರಿಂದ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದರು, ಆದರೆ ಕುಸ್ತಿಪಟುಗಳು ಮಹಿಳಾ ‘ಮಹಾಪಂಚಾಯತ್’ ಅನ್ನು ಹೊಸ ಸಂಸತ್ ಭವನದ ಕಡೆಗೆ ಕರೆದೊಯ್ಯಲು ಪ್ರಯತ್ನಿಸಿದ ನಂತರ ದೆಹಲಿ ಪೊಲೀಸರು ಅವರನ್ನು ಪ್ರತಿಭಟನಾ ಸ್ಥಳದಿಂದ ತೆಡೆಹಿಡಿದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!