October 14, 2026
Wednesday, October 14, 2026
spot_img

ಬ್ಲಾಕ್‌ ರ‍್ಯಾಲಿಯಲ್ಲಿ ದುಬಾರಿ ಸ್ಮಾರ್ಟ್‌ ವಾಚ್‌ ಕಳೆದುಕೊಂಡರಾ ಸಿಎಂ ಡಿ.ಕೆ. ಶಿವಕುಮಾರ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೆಹಲಿಯಲ್ಲಿ ಎಸ್‌ಐಆರ್‌ ವಿರುದ್ಧ ನಡೆದ ‘ಇಂಡಿ ಬ್ಲಾಕ್‌ ರ‍್ಯಾಲಿ’ಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್‌ ತಮ್ಮ ದುಬಾರಿ ಸ್ಮಾರ್ಟ್‌ ವಾಚ್‌ನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ರ‍್ಯಾಲಿಯಲ್ಲಿ ಲಕ್ಷಾಂತರ ಜನರು ಸೇರಿದ್ದರು. ಈ ವೇಳೆ ತಳ್ಳಾಟ, ನೂಕಾಟ ನಡೆದಿದ್ದು, ಇದರ ಮಧ್ಯೆ ಸಿಎಂ ಅವರ 40 ಸಾವಿರ ರೂಪಾಯಿ ಮೌಲ್ಯದ ಹುವೈ ವಾಚ್ ಕಳೆದುಹೋಗಿದೆ ಎಂದು ಹೇಳಲಾಗಿದೆ.

ಆದರೆ ಈ ಬಗ್ಗೆ ಸಿಎಂ ಅಥವಾ ವಕ್ತಾರರಿಂದ ಯಾವುದೇ ದೂರು ದಾಖಲಾಗಿಲ್ಲ. ರ‍್ಯಾಲಿಯಲ್ಲಿ ರಾಹುಲ್‌ ಗಾಂಧಿ ಅವರು ಸಿಎಂ ಡಿಕೆಶಿಯನ್ನು ತಳ್ಳಿ ಮುಂದಕ್ಕೆ ಹೋಗಿದ್ದರು ಎನ್ನಲಾದ ವಿಡಿಯೋಗಳು ವೈರಲ್‌ ಆಗಿತ್ತು. ಆದರೆ ಇದನ್ನು ಸಿಎಂ ಸುಳ್ಳು ಎಂದಿದ್ದಾರೆ. ನನ್ನನ್ನು ಯಾರೂ ತಳ್ಳಿಲ್ಲ, ಅಗೌರವಯುತವಾಗಿ ನಡೆಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಬಿಜೆಪಿ ಕಾಂಗ್ರೆಸ್‌ನಲ್ಲಿ ಡಿಕೆಶಿ ಅವರನ್ನು ಅಗೌರವದಿಂದ ಕಂಡಿದ್ದಾರೆ ಎನ್ನುವಂತಹ ವಿಡಿಯೋವನ್ನು ಅಪ್‌ಲೋಡ್‌ ಮಾಡಿದ್ದರು. ಆದರೆ ಸಿಎಂ ಇದೆಲ್ಲ ನೋಡೋದಕ್ಕೆ ಹಾಗೆ ಕಾಣಿಸಿರಬಹುದು, ಬಿಜೆಪಿ ಅವರಿಗೆ ಮಾಡಲು ಕೆಲಸ ಇಲ್ಲ. ಇಂಥ ವಿಷಯಗಳ ಬಗ್ಗೆ ಗಮನಹರಿಸಿಕೊಂಡು ಕೂತಿದ್ದಾರೆ. ನನಗೆ ಯಾವುದೇ ಬೇಸರ ಆಗಿಲ್ಲ, ಸಮಸ್ಯೆಯೂ ಆಗಿಲ್ಲ ಎಂದಿದ್ದಾರೆ.

ಇದರ ಜೊತೆಗೆ ರ‍್ಯಾಲಿ ಬಳಿಕ ರಾಹುಲ್‌ ಗಾಂಧಿ ಅವರ ನಿವಾಸದಲ್ಲಿ ನಡೆದ ಚಹಾಕೂಟದಲ್ಲಿ ಭಾಗಿಯಾಗಿದ್ದೆ. ಇಂಡಿ ಮೈತ್ರಿಕೂಟದ ನಾಯಕರು, ವಿಪಕ್ಷ ಸಂಸದರು, ವಿದ್ಯಾರ್ಥಿ ಸಂಘಟನೆಗಳ ಜೊತೆ ಕಾಲ ಕಳೆದೆ ಎಂದು ಟ್ವೀಟ್‌ ಮಾಡಿದ್ದಾರೆ.

Must Read