ಹೊಸದಿಗಂತ ವರದಿ ವಿಜಯಪುರ:
ಸೊಸೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 3.30 ಲಕ್ಷ ರೂ. ದಂಡ ವಿಧಿಸಿ ನಗರದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅದೇಶ ನೀಡಿದೆ.
ಇಲ್ಲಿನ ಗಣೇಶ ನಗರದ ನಿವಾಸಿ ರಮೇಶ ಮೂರಮಟ್ಟಿ ಶಿಕ್ಷೆಗೆ ಒಳಗಾದ ಆರೋಪಿ.
ಕಳೆದ ಏಪ್ರಿಲ್ 2020 ರಲ್ಲಿ ಆರೋಪಿ ರಮೇಶ ತನ್ನ ಮಗನ ಹೆಂಡತಿ ಎನ್ನದೇ ದೈಹಿಕವಾಗಿ ಸಂಪರ್ಕಿಸುವ ಉದ್ದೇಶದಿಂದ ಲೈಂಗಿಕ ಹಲ್ಲೆ ನಡೆಸಿ, ಯಾರಿಗೂ ಹೇಳದಂತೆ ಸೊಸೆಗೆ ಜೀವ ಬೆದರಿಕೆ ಹಾಕಿದ್ದನು.
ಈ ಸಂಬಂಧ ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡು, ವಾದ, ಪ್ರತಿವಾದವನ್ನು ಆಲಿಸಿದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಸಾಕ್ಷಿಗಳು ಆರೋಪಿ ರಮೇಶ ವಿರುದ್ಧ ರುಜುವಾತುವಾಗಿದಕ್ಕೆ, ಆರೋಪಿ ರಮೇಶನಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 3.30 ಲಕ್ಷ ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಇದನ್ನೂ ಓದಿ:
ವಿಜಯಪುರ ಮಹಿಳಾ ಪೊಲೀಸ್ ಠಾಣೆ ಅಂದಿನ ಪಿಎಸ್ ಐ ಶಕೀಲಾ ಪಿಂಜಾರೆ, ಪಿ.ಐ. ಬಾಗೇವಾಡಿ ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪನಾ ಪಟ್ಟಿ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ವನೀತಾ ಇಟಗಿ ವಾದ ಮಂಡಿಸಿದ್ದರು.



