October 18, 2026
Sunday, October 18, 2026
spot_img

ದಿನಭವಿಷ್ಯ: ಅನಿರೀಕ್ಷಿತ ಖರ್ಚು ಬರಲಿದೆ, ಕಾರ್ಯದಕ್ಷತೆಗೆ ಮೆಚ್ಚುಗೆ ದೊರೆಯಲಿದೆ

ಮೇಷ
ಮನೆಯಲ್ಲಿ ಹೊಂದಾಣಿಕೆ ಕೊರತೆ. ವಾಗ್ವಾದ ಸಂಭವ. ಸಂತೋಷ ತರುವ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಸಂಭ್ರಮಾಚರಣೆ.
ವೃಷಭ
ಚಿಂತೆ ಇಲ್ಲದ ನಿರಾಳ ದಿನ. ವೃತ್ತಿ ಬಿಕ್ಕಟ್ಟು ಪರಿಹಾರ. ಮನೆಯಲ್ಲಿನ ಉದ್ವಿಗ್ನತೆ ಕೂಡಾ ಶಮನ. ಆರ್ಥಿಕ ಕೊರತೆ ಕಾಡಲಾರದು.
ಮಿಥುನ
ಕೆಲವಾರು ವಿಷಯ ಏಕಕಾಲದಲ್ಲಿ ಇತ್ಯರ್ಥ ಮಾಡಬೇಕಾಗುವುದು. ಒತ್ತಡ ಬಿಟ್ಟು ಸಮಾಧಾನ ದಿಂದ ಚಿಂತಿಸಿ. ಕಾಲು ನೋವು ಬಾಧಿಸಬಹುದು.
ಕಟಕ
ಕಾಲಮಿತಿಯಲ್ಲಿ ನಿಮ್ಮ ಕಾರ್ಯ ಪೂರೈಸುವಿರಿ. ಆದಾಯ ಹೆಚ್ಚಳದ ಮಾರ್ಗ ತೆರೆಯಲಿದೆ. ಪ್ರೀತಿಯ ವಿಚಾರದಲ್ಲಿ ಅನಿಶ್ಚಿತತೆ ಮುಂದುವರಿಯುವುದು.
ಸಿಂಹ
ನಿಧಾನಗತಿಯಲ್ಲಿ ಕೆಲಸ ನಡೆದೀತು. ಧಾವಂತ ತೋರದಿರಿ. ಅನಿರೀಕ್ಷಿತ ಖರ್ಚು ಬರಲಿದೆ. ಕೆಲವರಿಗೆ ಅಜೀರ್ಣ ಸಮಸ್ಯೆ ಕಾಡಬಹುದು.
ಕನ್ಯಾ
ಎಲ್ಲ ವಿಚಾರದಲ್ಲೂ ನೀವಿಂದು ಹೆಚ್ಚಿನ ಗಮನ ನೀಡಬೇಕು. ವಾಗ್ವಾದ ನಡೆದೀತು. ಕೋಪ ನಿಯಂತ್ರಿಸಿ. ಅನಿಯಂತ್ರಿತ ವೆಚ್ಚವೂ ಹೆಚ್ಚಲಿದೆ.
ತುಲಾ
ಕೆಲಸದ ಒತ್ತಡ ಕಡಿಮೆ. ಮನಸ್ಸಿನ ನೆಮ್ಮದಿ ಕಾಪಾಡಲು ಹೊಂದಾಣಿಕೆ ಮಾರ್ಗ ಅನುಸರಿಸಿ. ಕೆಲ ವಿಚಾರದಲ್ಲಿ ನಿಮ್ಮ ನಿಲುವು ಸಡಿಲಿಸಲು ಸಿದ್ಧರಾಗಿ.
ವೃಶ್ಚಿಕ
ಸಮಸ್ಯೆ ಎದುರಾದರೆ ದಿಟ್ಟವಾಗಿ ಎದುರಿಸಿ. ಯಶಸ್ಸು ನಿಮ್ಮದೆ. ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ. ಹಣದ ಹರಿವು ಅಬಾಧಿತ.
ಧನು
ಸ್ಪಷ್ಟ ಚಿಂತನೆಯಿಂದ ವ್ಯವಹಾರ ಸುಲಭ. ಖರ್ಚು ಹೆಚ್ಚಳದಿಂದ ಚಿಂತೆ. ಸಣ್ಣ ಪ್ರಮಾಣದ ಅನಾರೋಗ್ಯ. ಬಂಧು ಜತೆ ಸಮನ್ವಯವಿರಲಿ.
ಮಕರ
ಎಂದಿಗಿಂತ ಹೆಚ್ಚು ಕೆಲಸದ ಒತ್ತಡ. ಏಕಾಗ್ರತೆ ಕಳೆದುಕೊಳ್ಳದಿರಿ. ಸಂಬಂಧದಲ್ಲಿ ಅಸಂತೃಪ್ತಿ. ಅಪವಾದ ಕೇಳಿಬಂದೀತು, ಎಚ್ಚರದಿಂದ ವ್ಯವಹರಿಸಿ.
ಕುಂಭ
ಕೆಲಸ ಸುಗಮವಾಗಿ ಸಾಗಲಿದೆ. ವ್ಯವಹಾರದಲ್ಲಿ ಪ್ರಗತಿ. ಪ್ರೀತಿಯಲ್ಲಿ ಯಶ. ಆರ್ಥಿಕ ವಿಚಾರದಲ್ಲಿ ಅತೃಪ್ತಿ ತ್ಯಜಿಸಿ. ಇದ್ದುದರಲ್ಲಿ ತೃಪ್ತಿ ಪಡಿ.
ಮೀನ
ಆತ್ಮೀಯರ ಜತೆ ಸಂವಹನದಲ್ಲಿ ಸಮಸ್ಯೆ. ತಪ್ಪು ಕಲ್ಪನೆ ಮೂಡದಂತೆ ಎಚ್ಚರ ವಹಿಸಿ. ನಿಮ್ಮ ಕಾರ್ಯದಕ್ಷತೆಗೆ ಮೆಚ್ಚುಗೆ ದೊರೆಯಲಿದೆ.

Must Read