October 18, 2026
Sunday, October 18, 2026
spot_img

ಅಪ್ರಾಪ್ತ ವಯಸ್ಕ ಬಾಲಕಿ ಮೇಲಿನ ದೌರ್ಜನ್ಯ ಕೇಸ್: ಆರೋಪಿಗೆ 23 ವರ್ಷ ಜೈಲು, 55 ಸಾವಿರ ರೂ ದಂಡ

ಹೊಸದಿಗಂತ ವರದಿ ಕಲಘಟಗಿ :

ತಾಲೂಕಿನ ಸೂಳಿಕಟ್ಟಿ ಗ್ರಾಮ ವ್ಯಾಪ್ತಿಯ ಸಚ್ಚಿದಾನಂದ ನಗರದ ಆರೋಪಿಯೊಬ್ಬನಿಗೆ ಬಾಲಕಿಯ ಮೇಲೆ 2023ರ ಆಗಸ್ಟ್ ತಿಂಗಳಲ್ಲಿ ಜರುಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಆರೋಪಿತನಿಗೆ 23 ವರ್ಷ ಜೈಲು ಶಿಕ್ಷೆ ಹಾಗೂ 55 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.

ಬಾಲಕಿ ತಂದೆ ನೀಡಿದ ದೂರಿನನ್ವಯ ಕಲಘಟಗಿ ಸಿಪಿಐ ಶ್ರೀಶೈಲ ಕೌಜಲಗಿ ಅವರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 2024ರ ಜೂನ್ ತಿಂಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು.

ಇದನ್ನೂ ಓದಿ:

 ಧಾರವಾಡದ 2ನೇ ಅಧಿಕ ಜಿಲ್ಲಾ ಮತ್ತು ವಿಶೇಷ ಪೋಕ್ಸೊ ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ರಾಜಕುಮಾರ ಸಿ ಅವರು ಆರೋಪಿತನಿಗೆ ಕಠಿಣ ಕಾರಾವಾಸ ಹಾಗೂ ದಂಡ ವಿಧಿಸಿ ತೀರ್ಪುನೀಡಿದ್ದಾರೆ. ಬಾಲಕಿಗೆ ರಾಜ್ಯದ ಸಂತ್ರಸ್ತ ನಿಧಿಯಿಂದ 6 ಲಕ್ಷ ರೂ ಪರಿಹಾರ ನೀಡಲು ಆದೇಶಿಸಲಾಗಿದೆ. ಸರಕಾರಿ ಅಭಿಯೋಜಕಿ ಶೈಲಾ ಅಂಗಡಿ ಅವರು ಅಭಿಯೋಜನೆ ಪರವಾಗಿ ವಾದ ಮಂಡಿಸಿದ್ದರು.

Must Read