ಬೇಕಾಗುವ ಪದಾರ್ಥಗಳು
ಮೊಸರು
ಮಾವಿನ ಹಣ್ಣು, ಬಾಳೆಹಣ್ಣು, ಸೇಬು
ಸಕ್ಕರೆ
ಏಲಕ್ಕಿ ಪುಡಿ
ಐಸ್ ಕ್ಯೂಬ್ಸ್
ಬಾದಾಮಿ, ಗೋಡಂಬಿ
ಮಾಡುವ ವಿಧಾನ
ಮೊದಲು ಕತ್ತರಿಸಿದ ಎಲ್ಲಾ ಹಣ್ಣುಗಳನ್ನು ಮಿಕ್ಸಿ ಜಾರ್ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ಗಟ್ಟಿ ಮೊಸರು, ಸಕ್ಕರೆ ಮತ್ತು ಏಲಕ್ಕಿ ಪುಡಿ ಸೇರಿಸಿ ಮತ್ತೊಮ್ಮೆ ನಯವಾಗಿ ಬ್ಲೆಂಡ್ ಮಾಡಿ. ಈಗ ಸಿದ್ಧವಾದ ಲಸ್ಸಿಯನ್ನು ಗ್ಲಾಸ್ಗೆ ಸುರಿದು, ಮೇಲೆ ಸಣ್ಣಗೆ ಕತ್ತರಿಸಿದ ಬಾದಾಮಿ, ಗೋಡಂಬಿ ಮತ್ತು ಹಣ್ಣಿನ ತುಂಡುಗಳಿಂದ ಅಲಂಕರಿಸಿದರೆ ತಂಪು ತಂಪಾದ ಮಿಕ್ಸ್ಡ್ ಫ್ರೂಟ್ ಲಸ್ಸಿ ಸಿದ್ಧ!



