ಹೊಸದಿಗಂತ ವರದಿ ಮುಂಡಗೋಡ:
ಪಟ್ಟಣದ ಅಂಗಡಿಯೊಂದರಲ್ಲಿ ಅಪರೂಪದ ಬೆಕ್ಕು ಹಾವು (ಕ್ಯಾಟ್ ಸ್ನೇಕ್) ಕಾಣಿಸಿಕೊಂಡಿದ್ದು, ಅರಣ್ಯ ಸಿಬ್ಬಂದಿ ಅದನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಪಟ್ಟಣದ ಗಣೇಶ ಶಿರಾಲಿ ಅವರ ಅಂಗಡಿಯಲ್ಲಿ ಹಾವು ಕಾಣಿಸಿಕೊಂಡಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗಸ್ತು ಅರಣ್ಯ ಪಾಲಕ ಮುತ್ತುರಾಜ ಹಳ್ಳಿ ಅವರು ಹಾವನ್ನು ಯಾವುದೇ ಹಾನಿಯಾಗದಂತೆ ಜಾಗರೂಕತೆಯಿಂದ ಹಿಡಿದು ರಕ್ಷಿಸಿದರು.
ಬೆಕ್ಕಿನ ಕಣ್ಣಿನಂತೆ ಕಾಣುವ ಉದ್ದನೆಯ ಪಾಪೆಗಳನ್ನು ಹೊಂದಿರುವ ಈ ಹಾವು ಸಾಮಾನ್ಯವಾಗಿ ರಾತ್ರಿ ವೇಳೆ ಸಂಚರಿಸುತ್ತದೆ. ಹೆಚ್ಚಾಗಿ ಮರಗಳ ಮೇಲೆ ವಾಸಿಸುವ ಈ ಹಾವು ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾಗಿದೆ.
ಇದನ್ನೂ ಓದಿ:
ಈ ಹಾವು ಕಡಿಮೆ ವಿಷಕಾರಿ ಜಾತಿಗೆ ಸೇರಿದ್ದು, ಸಾಮಾನ್ಯವಾಗಿ ಮನುಷ್ಯರಿಗೆ ಅಪಾಯಕಾರಿಯಲ್ಲ ಎಂದು ತಿಳಿದುಬಂದಿದೆ. ಹಾವನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಅದರ ನೈಸರ್ಗಿಕ ವಾತಾವರಣಕ್ಕೆ ಬಿಡಲಾಯಿತು.ಅಪರೂಪದ ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟ ಅರಣ್ಯ ಸಿಬ್ಬಂದಿಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



