October 23, 2026
Friday, October 23, 2026
spot_img

ದಕ್ಷಿಣ ಕನ್ನಡ ಕೊಡಗು ಗಡಿಭಾಗದಲ್ಲಿ ಮರಿಯಾನೆ ಮೃತದೇಹ ಪತ್ತೆ: ಸ್ಥಳಕ್ಕೆ ಅರಣ್ಯಾಧಿಕಾರಿಗಳ ದೌಡು

ಹೊಸದಿಗಂತ, ಸುಳ್ಯ:

ದಕ್ಷಿಣ ಕನ್ನಡ – ಕೊಡಗು ಗಡಿ ಭಾಗದಲ್ಲಿ ಒಂದು ವರ್ಷದ ಆನೆ ಮರಿಯೊಂದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ತೊಡಿಕಾನ ಗ್ರಾಮದ ಹರ್ಲಡ್ಕ ಎಂಬಲ್ಲಿನ ಕೃಷಿ ತೋಟದಲ್ಲಿ ಆನೆ ಮರಿ ಸಾವಿಗೀಡಾಗಿದೆ.

ಕೊಡಗಿನ ಭಾಗಮಂಡಲ ಮೀಸಲು ಅರಣ್ಯದಿಂದ ಬಂದ ಆನೆಗಳ ಹಿಂಡು ರಬ್ಬರ್ ತೋಟ ಹಾಗೂ ಇತರೆ ಕೃಷಿಗಳನ್ನು ನಾಶ ಪಡಿಸಿ ಬಳಿಕ ಗುಡ್ಡವನ್ನು ಹತ್ತಿ ವಾಪಾಸು ಕಾಡಿಗೆ ತೆರಳುವಾಗ ಈ ಮರಿಯಾನೆ ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು ಇತರ ಆನೆಗಳ ಕಾಲಿಗೆ ಸಿಲುಕಿ ಮರಿಯಾನೆ ಸಾವಿಗೀಡಾಗಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಸಭೆಯ ಬಳಿಕ ಅರಣ್ಯಾಧಿಕಾರಿ ನಿರಂಜನ್ ಶೆಟ್ಟಿ ಪಶುಸಂಗೋಪನೆ ಇಲಾಖೆ ವೈಧ್ಯಾಧಿಕಾರಿ ಡಾ.ನಿತಿನ್ ಪ್ರಭು ತೆರಳಬೇಕಿದ್ದು, ಆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

Must Read