ಏನೇನ್ ಬೇಕು?
ಗೋಧಿ ಹಿಟ್ಟು
ಹೆಸರು ಬೇಳೆ, ತೊಗರಿ ಬೇಳೆ
ಸೋಯಾ ಚಂಕ್ಸ್
ಈರುಳ್ಳಿ
ಹಸಿಮೆಣಸಿನಕಾಯಿ
ಜೀರಿಗೆ ಪುಡಿ, ಗರಂ ಮಸಾಲಾ, ಅರಿಶಿಣ
ಉಪ್ಪು, ಎಣ್ಣೆ
ಕೊತ್ತಂಬರಿ ಸೊಪ್ಪು
ಮಾಡೋದು ಹೇಗೆ ನೋಡಿಕೊಳ್ಳಿ
ಮೊದಲು ಗೋಧಿ ಹಿಟ್ಟಿಗೆ ಸ್ವಲ್ಪ ಉಪ್ಪು ಮತ್ತು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ನಯವಾಗಿ ಕಲಸಿ 15 ನಿಮಿಷ ನೆನೆಸಿಡಿ. ಇನ್ನೊಂದೆಡೆ, ಬೇಯಿಸಿದ ಬೇಳೆ ಮತ್ತು ನೆನೆಸಿರುವ ಸೋಯಾ ಚಂಕ್ಸ್ ಅನ್ನು ಒಂದು ಪಾತ್ರೆಗೆ ಹಾಕಿ. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಜೀರಿಗೆ ಪುಡಿ, ಗರಂ ಮಸಾಲಾ, ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಕಲಸಿಟ್ಟ ಗೋಧಿ ಹಿಟ್ಟಿನಿಂದ ದೊಡ್ಡ ಉಂಡೆಗಳನ್ನು ಮಾಡಿ, ಒಳಗೆ ಈ ಸೋಯಾ-ದಾಲ್ ಹೂರಣವನ್ನು ತುಂಬಿ ನಿಧಾನವಾಗಿ ಲಟ್ಟಿಸಿಕೊಳ್ಳಿ. ಕಾದ ಹಂಚಿನ ಮೇಲೆ ಲಟ್ಟಿಸಿದ ಪರೋಟವನ್ನು ಹಾಕಿ, ಎರಡೂ ಕಡೆಗಳಲ್ಲಿ ಎಣ್ಣೆ ಸವರಿ ಗೋಲ್ಡನ್ ಬ್ರೌನ್ ಬರುವವರೆಗೆ ಚೆನ್ನಾಗಿ ಬೇಯಿಸಿ. ಈಗ ಬಿಸಿಬಿಸಿಯಾದ ರುಚಿಕರ ಸೋಯಾ ದಾಲ್ ಪರೋಟ ಸವಿಯಲು ಸಿದ್ಧ!
ಇದನ್ನ ತಿಂದ್ರೆ ಏನ್ ಲಾಭ?
ಈ ಪರೋಟದಲ್ಲಿ ಸೋಯಾ ಮತ್ತು ಬೇಳೆ ಇರುವುದರಿಂದ ದೇಹಕ್ಕೆ ಬೇಕಾದ ಪ್ರೋಟೀನ್ ದೊರೆಯುತ್ತವೆ.
ತರಕಾರಿಗಳನ್ನು ತಿನ್ನಲು ನಟಿಸುವ ಮಕ್ಕಳಿಗೂ ಇದು ಅತ್ಯುತ್ತಮ ಆಯ್ಕೆಯಾಗಿದೆ.
ಇದು ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುವುದರ ಜೊತೆಗೆ ಸ್ನಾಯುಗಳ ಬಲಪಡಿಸುವಿಕೆಗೆ ಸಹಕರಿಸುತ್ತದೆ.
ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಜೀರ್ಣವಾಗಲು ಇದು ಅತ್ಯಂತ ಸುಲಭ.



