ಹೊಸದಿಗಂತ ವರದಿ ಬಳ್ಳಾರಿ:
ನ.10ರೊಳಗೆ ಬಿ.ನಾಗೇಂದ್ರ ಅವರು ಮತ್ತೆ ಮಂತ್ರಿಯಾಗಲಿದ್ದಾರೆ, ಜಿಲ್ಲಾ ಉಸ್ತುವಾರಿಯಾಗಿ ಮತ್ತೆ ಬಳ್ಳಾರಿಗೆ ಬರಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ನಗರದಲ್ಲಿ ಭಾನುವಾರ ಮಾತನಾಡಿದ ಅವರು, ನಿಗಮದ ಹಣ ರಿಕವರಿ ಆಗಿದೆ, ಸಿಬಿಐ ತನಿಖೆ ನಡೀತಿದೆ, ವರದಿ ಬರಲಿ. ನಾಗೇಂದ್ರ ಅವರು ಈ ಬಾರಿ ರಾಜುನಾಮೆ ಕೊಟ್ಟಿದ್ದು ಅವರ ಸ್ವಇಚ್ಛೆಯಿಂದ, ಇದು ನನಗೆ ಪಕ್ಕ ಗೊತ್ತಿದೆ. ಹೈಕಮಾಂಡ್ ಸೂಚನೆ ನೀಡಿರಲಿಲ್ಲ. ಬಿಜೆಪಿ ಅವರ ಅಪಪ್ರಚಾರ, ಬಿಜೆಪಿ ಅವರು ಅಧಿವೇಶನ ನಡೆಸಲು ಬಿಡಲಿಲ್ಲ, ಪಾದಯಾತ್ರೆ ನಡೆಸಿದರು, ಪಕ್ಷಕ್ಕೆ ಮುಜುಗರ ಆಗಬಾರದು, ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದು ಎಂದು ನಾಗೇಂದ್ರ ಅವರು ಸ್ವಚ್ಚೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮತ್ತೆ ಸಚಿವರಾಗುವ ವಿಶ್ವಾಸವಿದೆ, ಕಾದು ನೋಡಿ ಎಂದರು.
ಇನ್ನೂ ಒಂದೂವರೆ ವರ್ಷ ಇದೆ, ಬಳ್ಳಾರಿಯಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ದ್ವಜಾರೋಹಣ ನೆರವೇರಿಸಬೇಕು ಎನ್ನುವ ಆಸೆ ಇತ್ತು. ಅದನ್ನು ನಮ್ಮ ಸಿ. ಎಂ. ಡಿ. ಕೆ. ಶಿವಕುಮಾರ್ ಅವರು ನೆರವೇರಿಸಿ ಕೊಟ್ಟಿದ್ದಾರೆ, ಅಭಿನಂದನೆಗಳನ್ನು ಸಲ್ಲಿಸುವೆ.
ಸ್ಟಿಂಗ್ ಆರೋಪಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಅವರು ದೇಹಲಿಗೆ ತೆರಳಿದ್ದಾರೆ ಎನ್ನುವುದು ತಪ್ಪು, ಸುಳ್ಳು, ದೆಹಲಿಯಲ್ಲಿ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದೂ, ವೇಣುಗೋಪಾಲ್ ಅವರೇ ಕರೆ ಮಾಡಿ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ಇತರರಿದ್ದರು.



