ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಪೇನ್ನ ಫುಟ್ಬಾಲ್ ಮೈದಾನದಲ್ಲಿ ನಡೆದ ಭೀಕರ ಅಪಘಾತವೊಂದು ಕ್ರೀಡಾಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಸ್ಪ್ಯಾನಿಷ್ ಎರಡನೇ ಡಿವಿಷನ್ ಪಂದ್ಯದಲ್ಲಿ ಎದುರಾಳಿ ತಂಡದ ಗೋಲ್ಕೀಪರ್ ಜೊತೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಸಿಡಿ ಟೆನೆರಿಫೆ ತಂಡದ ಸ್ಟ್ರೈಕರ್ ಜೀಸಸ್ ಡಿ ಮಿಗುಯೆಲ್ (30) ಮಂಗಳವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆಟದ ವೇಳೆ ಸಂಭವಿಸಿದ ಈ ದುರಂತ ಕ್ರೀಡಾ ಜಗತ್ತಿಗೆ ಆಘಾತ ತಂದಿದೆ.
ಪಂದ್ಯದ ಕೊನೆಯ ಕ್ಷಣಗಳಲ್ಲಿ ಭೀಕರ ಡಿಕ್ಕಿ
ಟೆನೆರಿಫೆಯ ಹೆಲಿಯೋಡೊರೊ ರೊಡ್ರಿಗಸ್ ಲೋಪೆಜ್ ಕ್ರೀಡಾಂಗಣದಲ್ಲಿ ಪಂದ್ಯ 2-2ರ ಸಮಬಲದಲ್ಲಿದ್ದಾಗ ಘಟನೆ ನಡೆದಿದೆ. ಮಧ್ಯಮೈದಾನದ ಸಮೀಪ ಚೆಂಡನ್ನು ತೆರವುಗೊಳಿಸಲು ಗೋಲ್ಕೀಪರ್ ಜೀಸಸ್ ಓವೊನೊ ಮುಂದಕ್ಕೆ ಓಡಿದ್ದಾರೆ. ಈ ವೇಳೆ ಡಿ ಮಿಗುಯೆಲ್ ಅವರೊಂದಿಗೆ ಭೀಕರವಾಗಿ ಡಿಕ್ಕಿಯಾಗಿದ್ದು, ಆಟಗಾರ ಮೈದಾನದಲ್ಲೇ ಕುಸಿದುಬಿದ್ದಿದ್ದಾರೆ. ಘಟನೆಯ ಬಳಿಕ ಓವೊನೊಗೆ ರೆಡ್ ಕಾರ್ಡ್ ನೀಡಲಾಗಿದ್ದು, ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಇದನ್ನೂ ಓದಿ:
ಹೃದಯಾಘಾತ, ತೀವ್ರ ನಿಗಾ ಚಿಕಿತ್ಸೆ
ಸ್ಪ್ಯಾನಿಷ್ ಮಾಧ್ಯಮಗಳ ವರದಿಗಳ ಪ್ರಕಾರ, ಡಿಕ್ಕಿಯ ನಂತರ ಡಿ ಮಿಗುಯೆಲ್ಗೆ ಹೃದಯ ಸ್ತಂಭನ ಸಂಭವಿಸಿತ್ತು. ವೈದ್ಯಕೀಯ ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಸ್ಥಿತಿ ಬಳಿಕ ಮತ್ತಷ್ಟು ಹದಗೆಟ್ಟಿತ್ತು. ಮಂಗಳವಾರ ಕೊನೆಯುಸಿರೆಳೆದಿದ್ದಾರೆ.



