November 3, 2026
Tuesday, November 3, 2026
spot_img

ಹಾಸನಾಂಬೆ ದರುಶನದ ವೇಳೆ ಮೂರು ಲಕ್ಷ ರೂಪಾಯಿಯ ಚಿನ್ನದ ಬಳೆ ಕಳೆದುಕೊಂಡ ಮಹಿಳೆ, ಸಿಬ್ಬಂದಿ ಮಾಡಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಾಸನಾಂಬ ದೇವಿ ದರುಶನಕ್ಕೆ ಬಂದಿದ್ದ ಮಹಿಳೆಯೊಬ್ಬರು ತಮ್ಮ ಮೂರು ಲಕ್ಷ ರೂಪಾಯಿಯ ಬಳೆಯನ್ನು ಕಳೆದುಕೊಂಡಿದ್ದು, ಕಂದಾಯ ಇಲಾಖೆ ಸಿಬ್ಬಂದಿ ಅದನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ರಮ್ಯಾ ಎನ್ನುವವರು ಸಾವಿರ ರೂಪಾಯಿ ನೀಡಿ ವಿಶೇಷ ದರುಶನದ ಕ್ಯೂನಲ್ಲಿ ನಿಂತಿದ್ದರು. ಸರತಿ ಸಾಲಿನಲ್ಲಿ ನಿಂತಾದ ಆದ ಸಣ್ಣ ಪುಟ್ಟ ನೂಕು ನುಗ್ಗಲಿನಲ್ಲಿ ಅವರ ಬ್ರೇಸ್‌ಲೆಟ್‌ ಹುಕ್‌ ಬಿಚ್ಚಿ ಕೆಳಕ್ಕೆ ಬಿದ್ದಿತ್ತು. ಬರೋಬ್ಬರಿ 30 ಗ್ರಾಂ ತೂಕದ ಬಳೆ ಇದಾಗಿದ್ದು, ರಮ್ಯಾ ಗಾಬರಿಯಿಂದ ಎಲ್ಲೆಡೆ ಹುಡುಕಾಡಿದ್ದರು. ಎಲ್ಲಿಯೂ ಬಳೆ ಸಿಕ್ಕಿರಲಿಲ್ಲ.

ತದನಂತರ ಬಳೆ ಕಂದಾಯ ಇಲಾಖೆಯ ಸಿಬ್ಬಂದಿಯೊಬ್ಬರಿಗೆ ಸಿಕ್ಕಿದ್ದು, ಅವರು ಅದನ್ನು ತಾವೇ ಇಟ್ಟುಕೊಳ್ಳದೇ ದೇವಾಲಯದಲ್ಲಿ ಅನೌನ್ಸ್‌ ಮಾಡುತ್ತಿದ್ದ ಲಕ್ಷ್ಮೀನಾರಾಯಣ ಅವರಿಗೆ ನೀಡಿ ಬಳೆ ಕಳೆದುಕೊಂಡವರು ಬರುವಂತೆ ಅನೌನ್ಸ್‌ ಮಾಡಿಸಿದ್ದಾರೆ. ಮೈಕ್‌ನಲ್ಲಿ ಘೋಷಣೆ ಕೇಳುತ್ತಿದ್ದಂತೆಯೇ ರಮ್ಯಾ ಸ್ಥಳಕ್ಕೆ ಆಗಮಿಸಿ ಬಳೆ ತಮ್ಮದೆನ್ನುವುದಕ್ಕೆ ಗುರುತು ತೋರಿಸಿದ್ದಾರೆ.

ತದನಂತರ ಕಂದಾಯ ಇಲಾಖೆ ಸಿಬ್ಬಂದಿ ಬಳೆಯನ್ನು ರಮ್ಯಾಗೆ ನೀಡಿದ್ದಾರೆ. ಈಗಿನ ಕಾಲದಲ್ಲಿಯೂ ಇಷ್ಟು ಪ್ರಾಮಾಣಿಕವಾಗಿ ಬಳೆಯನ್ನು ಹಿಂದಿರುಗಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್‌ ಆಗಿದ್ದು, ಪ್ರಾಮಾಣಿಕ ವ್ಯಕ್ತಿಗಳಿಗೆ ಎಂಥದ್ದೇ ಆಸೆ ತೋರಿಸಿದರೂ ಅವರು ನ್ಯಾಯವನ್ನೇ ಆಯ್ಕೆ ಮಾಡುತ್ತಾರೆ ಎಂದು ಹೇಳಿದ್ದಾರೆ.

Must Read