ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ–ಉಕ್ರೇನ್ ಯುದ್ಧಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ ಹೊಸ ಮಾತುಕತೆ ನಡೆಯಲು ಸಿದ್ಧತೆಗಳಾಗುತ್ತಿರುವ ಬೆನ್ನಲ್ಲೇ, ಉಕ್ರೇನ್ ಮೇಲೆ ರಷ್ಯಾದ ದಾಳಿಗಳು ತೀವ್ರಗೊಂಡಿವೆ.
ಜಪೊರಿಜಿಯಾ ಪ್ರದೇಶದ ಕೊಮಿಶುವಾಖಾ ಗ್ರಾಮದಲ್ಲಿ ಮಾನವೀಯ ನೆರವು ವಿತರಿಸುತ್ತಿದ್ದ ಕೇಂದ್ರದ ಮೇಲೆ ನಡೆದ ದಾಳಿಯಲ್ಲಿ 29 ಮಂದಿ ಮೃತಪಟ್ಟಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಆತಂಕವಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.
ಖಾರ್ಕಿವ್ ಆಸ್ಪತ್ರೆ ಮೇಲೂ ದಾಳಿ
ಮಂಗಳವಾರ ಖಾರ್ಕಿವ್ನ ಆಸ್ಪತ್ರೆಯ ಮೇಲೆ ನಡೆದ ದಾಳಿಯಲ್ಲಿ 73 ಮಂದಿ ಗಾಯಗೊಂಡಿದ್ದು, ಹೃದ್ರೋಗ ವಿಭಾಗಕ್ಕೆ ಹಾನಿಯಾಗಿದೆ. ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳೂ ದಾಳಿಯ ಪರಿಣಾಮಕ್ಕೆ ಒಳಗಾಗಿದ್ದಾರೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಡ್ನಿಪ್ರೊಪೆಟ್ರೋವ್ಸ್ಕ್ ಪ್ರದೇಶದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ.
ಕೊಮಿಶುವಾಖಾ ಗ್ರಾಮದಲ್ಲಿ 48 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ರಕ್ಷಣಾ ಕಾರ್ಯಾಚರಣೆಗಳು ಭದ್ರತಾ ಪರಿಸ್ಥಿತಿಗೆ ಅನುಗುಣವಾಗಿ ಮುಂದುವರಿದಿವೆ.
ಇದನ್ನೂ ಓದಿ:
ಅಬುಧಾಬಿಯಲ್ಲಿ ಶಾಂತಿ ಮಾತುಕತೆ
ನವೆಂಬರ್ 10 ಮತ್ತು 11ರಂದು ಅಬುಧಾಬಿಯಲ್ಲಿ ರಷ್ಯಾ, ಉಕ್ರೇನ್ ಹಾಗೂ ಅಮೆರಿಕದ ಪ್ರತಿನಿಧಿಗಳ ನಡುವೆ ಮಾತುಕತೆ ನಡೆಯಲಿದೆ ಎಂದು ಅಮೆರಿಕದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ತಿಳಿಸಿದ್ದಾರೆ. ಯುದ್ಧಾನಂತರದ ಭದ್ರತಾ ವ್ಯವಸ್ಥೆ, ಉದ್ವಿಗ್ನತೆ ಕಡಿತ, ಮಾನವೀಯ ನೆರವು ಮತ್ತು ಶಾಂತಿಯ ಮುಂದಿನ ಹಂತಗಳು ಚರ್ಚೆಯ ವಿಷಯಗಳಾಗಿವೆ.
ಬರ್ಲಿನ್ನಲ್ಲಿ ಝೆಲೆನ್ಸ್ಕಿ
ಜರ್ಮನಿಗೆ ಭೇಟಿ ನೀಡಿರುವ ಝೆಲೆನ್ಸ್ಕಿ, ಚಾನ್ಸಲರ್ ಫ್ರಿಡ್ರಿಕ್ ಮೆರ್ಝ್ ಅವರೊಂದಿಗೆ ವಾಯು ರಕ್ಷ



