November 4, 2026
Wednesday, November 4, 2026
spot_img

ಫಿಟ್ & ಫುಡ್ 04 | ಬರೀ ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ದಿ ಬೆಸ್ಟ್ ಚಾಯ್ಸ್ ಈ ಸೂಪರ್ ಟೇಸ್ಟಿ ವೆಜ್ ಬಿರಿಯಾನಿ

ಏನೇನ್ ಬೇಕು?

ಅಕ್ಕಿ

ಕ್ಯಾರೆಟ್, ಬೀನ್ಸ್, ಆಲೂಗಡ್ಡೆ, ಬಟಾಣಿ

ಈರುಳ್ಳಿ

ಟೊಮೆಟೊ

ಹಸಿಮೆಣಸಿನಕಾಯಿ

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಪುದೀನ

ಕೊತ್ತಂಬರಿ ಸೊಪ್ಪು

ಎಣ್ಣೆ

ಚಕ್ಕೆ

ಲವಂಗ

ಏಲಕ್ಕಿ

ಬಿರಿಯಾನಿ ಎಲೆ

ಅರಿಶಿಣ

ಖಾರದ ಪುಡಿ

ಗರಂ ಮಸಲಾ

ಮಾಡೋದು ಹೇಗೆ ನೋಡಿಕೊಳ್ಳಿ

ಬಾಸ್ಮತಿ ಅಕ್ಕಿಯನ್ನು 20 ನಿಮಿಷ ನೆನೆಸಿ, ಅರ್ಧ ಬೇಯಿಸಿ ಬದಿಗೆತ್ತಿಡಿ. ಕುಕ್ಕರ್ ಅಥವಾ ಪಾತ್ರೆಯಲ್ಲಿ ಎಣ್ಣೆ ಹಾಕಿ, ಚಕ್ಕೆ-ಲವಂಗ ಹಾಗೂ ಕತ್ತರಿಸಿದ ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಬರುವವರೆಗೆ ಹುರಿಯಿರಿ. ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಟೊಮೆಟೊ ಮತ್ತು ಪುದೀನ ಹಾಕಿ ಚೆನ್ನಾಗಿ ಬಾಡಿಸಿ. ಕ್ಯಾರೆಟ್, ಬೀನ್ಸ್, ಬಟಾಣಿ, ಆಲೂಗಡ್ಡೆ ಸೇರಿಸಿ, ಮಸಾಲೆಗಳೊಂದಿಗೆ (ಅರಿಶಿಣ, ಖಾರದ ಪುಡಿ, ಗರಂ ಮಸಲಾ) ಚೆನ್ನಾಗಿ ಮಿಕ್ಸ್ ಮಾಡಿ 2 ನಿಮಿಷ ಬೇಯಿಸಿ. ಕೊನೆಯಲ್ಲಿ ಬೇಯಿಸಿದ ಅಕ್ಕಿಯನ್ನು ತರಕಾರಿಗಳ ಮೇಲೆ ಸಮವಾಗಿ ಹರಡಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 10 ನಿಮಿಷ ಬಿಡಿ. ಈಗ ರುಚಿರುಚಿಯಾದ, ಘಮಘಮಿಸುವ ವೆಜ್ ಬಿರಿಯಾನಿ ಸವಿಯಲು ಸಿದ್ಧ!

ಇದನ್ನ ತಿಂದ್ರೆ ಏನ್ ಲಾಭ?

ಕ್ಯಾರೆಟ್, ಬೀನ್ಸ್ ಮತ್ತು ಬಟಾಣಿಯಂತಹ ತರಕಾರಿಗಳು ದೇಹಕ್ಕೆ ಬೇಕಾದ ವಿಟಮಿನ್ A, C ಹಾಗೂ ನಾರಿನಾಂಶವನ್ನು ನೀಡುತ್ತವೆ.

ಇದರಲ್ಲಿ ಬಳಸುವ ಪುದೀನ, ಶುಂಠಿ ಮತ್ತು ಜೀರ್ಣಕಾರಿ ಮಸಾಲೆಗಳು ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತವೆ.

ಇದು ಕಾರ್ಬೋಹೈಡ್ರೇಟ್ಸ್ ಮತ್ತು ಪ್ರೊಟೀನ್‌ಗಳ ಸಮತೋಲಿತ ಆಹಾರವಾಗಿರುವುದರಿಂದ, ಇಡೀ ದಿನ ದೇಹಕ್ಕೆ ಬೇಕಾದ ಎನರ್ಜಿ ಸಿಗುತ್ತದೆ.

ಜಂಕ್ ಫುಡ್ ಬದಲು ತರಕಾರಿಗಳಿಂದ ಮಾಡಿದ ಬಿರಿಯಾನಿ ತಿಂದರೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ.

Must Read

Skip to toolbar