November 5, 2026
Thursday, November 5, 2026
spot_img

ನಾಲಿಗೆಗೆ ಸಖತ್‌ ರುಚಿ ನೀಡುವ ಉಪ್ಪು-ಖಾರ ಚಿಕನ್‌ ಟ್ರೈ ಮಾಡಿದ್ದೀರಾ? ಇಲ್ಲಿದೆ ರೆಸಿಪಿ

ಬೇಕಾಗುವ ಸಾಮಾಗ್ರಿಗಳು
ತುಪ್ಪ: ಎರಡು ಸ್ಪೂನ್
ಚಿಕನ್‌ : ಅರ್ಧ ಕೆಜಿ
ಖಾರದಪುಡಿ: ಎರಡು ಸ್ಪೂನ್‌
ಮೆಣಸುಕಾಳಿನ ಪುಡಿ: ಒಂದು ಸ್ಪೂನ್‌
ಉಪ್ಪು: ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಎರಡು ಸ್ಪೂನ್‌ ತುಪ್ಪ ಹಾಕಿ
ತದನಂತರ ಇದಕ್ಕೆ ಚಿಕನ್‌ ಹಾಕಿ ಚೆನ್ನಾಗಿ ಬಾಡಿಸಿ
ನಂತರ ಉಪ್ಪು ಹಾಕಿ. ಚಿಕನ್‌ ಸ್ವಲ್ಪ ನೀರು ಬಿಟ್ಟುಕೊಳ್ಳುತ್ತಿದ್ದಂತೆಯೇ ಖಾರದಪುಡಿ ಹಾಗೂ ಪೆಪ್ಪರ್‌ ಪುಡಿ ಹಾಕಿ
ನಂತರ ಒಂದು ವಿಶಲ್‌ ಕೂಗಿಸಿ. ನೀರಿನಂಶ ಇದ್ದರೆ ಡ್ರೈ ಆಗುವವರೆಗೂ ಸಣ್ಣ ಉರಿಯಲ್ಲಿ ಬೇಯಿಸಿದ್ರೆ ಉಪ್ಪು ಖಾರ ಚಿಕನ್‌ ರೆಡಿ

Must Read