ಹೊಸದಿಗಂತ ವರದಿ ಉಳ್ಳಾಲ:
ರಾಜ್ಯ ಸರಕಾರದ ಹಣಕಾಸು ಇಲಾಖೆಯು ನಮ್ಮಲ್ಲಿ ಆರ್ಥಿಕ ನಿಧಿ ಇಲ್ಲ, ಹೊಸ ಯೋಜನೆಗಳ ಘೋಷಣೆ ಮಾಡಬೇಡಿಯೆಂದು ಹೇಳುತ್ತಿದ್ದರೂ ಸಹ ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ ಕ್ಯಾಬಿನೆಟ್ ಸಭೆ ನಡೆಸಿ ಜಿಲ್ಲೆಯ ಅಭಿವೃದ್ಧಿಗೆ 32 ಸಾವಿರ ಕೋಟಿ ಅನುದಾನ ನೀಡುತ್ತೇವೆಂದು ಹೇಳಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಗ್ಯಾರಂಟಿ ಯೋಜನೆಗಳ ಪರಿಣಾಮವಾಗಿ ವೃದ್ದಾಪ್ಯ ವೇತನ, ವಿಧವೆ ವೇತನ, ಸಂಧ್ಯಾ ಸುರಕ್ಷಾ ವೇತನಗಳು ಸ್ಥಗಿತಗೊಂಡಿದ್ದು,ಅನೇಕ ಕುಟುಂಬದ ರೇಷನ್ ಕಾರ್ಡ್ ಗಳು ಕೂಡಾ ರದ್ದಾಗಿವೆಯೆಂದು ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಸೋಮೇಶ್ವರ ಮಹಾಶಕ್ತಿ ಕೇಂದ್ರದ ವತಿಯಿಂದ ಗುರುವಾರದಂದು ಸೋಮೇಶ್ವರ ಪುರಸಭೆ ಕಾರ್ಯಾಲಯದ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ಧೇಶಿಸಿ ಅವರು ಮಾತನಾಡಿದರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪುರಸಭೆಗಳಿಗೆ ಪ್ರತೀ ವರುಷ ಹತ್ತರಿಂದ ಹನ್ನೆರಡು ಕೋಟಿ ವಿಶೇಷ ಅನುದಾನವನ್ನು ನೀಡುತ್ತಿದ್ದರು.ಆದರೆ ಈಗಿನ ಕಾಂಗ್ರೆಸ್ ಸರಕಾರವು ಪುರಸಭೆಗಳಿಗೆ ಬಿಡಿಕಾಸನ್ನೂ ನೀಡಿಲ್ಲ.ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಯಾವುದೇ ವಿದಾನಸಭಾ ಕ್ಷೇತ್ರದಲ್ಲೂ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ.ಮಂಗಳೂರು ವಿದಾನಸಭಾ ಕ್ಷೇತ್ರವೂ ಅದಕ್ಕೆ ಹೊರತಾಗಿಲ್ಲ.ಇಲ್ಲಿನ ಶಾಸಕ ಯು.ಟಿ ಖಾದರ್ ಅವರು ಕೇವಲ ಉಳ್ಳಾಲ ನಗರ ಭಾಗದಲ್ಲಿ ಮಾತ್ರ ಅಭಿವೃದ್ಧಿ ಕಾಮಗಾರಿಗಳನ್ನ ನಡೆಸಿ ಸೋಮೇಶ್ವರ ಪುರಸಭೆ ವ್ಯಾಪ್ತಿಗೆ ಅನುದಾನ ನೀಡದೆ ತಾರತಮ್ಯ ಎಸಗುತ್ತಿದ್ದಾರೆಂದು ಸುಧೀರ್ ಶೆಟ್ಟಿ ಆರೋಪಿಸಿದರು.
ಪ್ರತಿಭಟನೆಗೂ ಮುನ್ನ ಕೋಟೆಕಾರು ಬೀರಿ ಜಂಕ್ಷನ್ ನಿಂದ ಸೋಮೇಶ್ವರ ಪುರಸಭೆ ಕಾರ್ಯಾಲಯದವರೆಗೆ ಬಿಜೆಪಿ ಕಾರ್ಯಕರ್ತರಿಂದ “ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ” ಪಾದಯಾತ್ರೆ ಪ್ರತಿಭಟನಾ ಜಾಥಾ ನಡೆಯಿತು.
ಬಿಜೆಪಿ ಸೋಮೇಶ್ವರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಪರ್ಯತ್ತೂರು ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಬಿಜೆಪಿ ಮುಖಂಡರಾದ ಸೀತಾರಾಮ ಬಂಗೇರ, ಸೋಮೇಶ್ವರ ಪುರಸಭೆಯ ಅಧ್ಯಕ್ಷರ ಕಮಲ, ಕೋಟೆಕಾರು ಪ.ಪಂ ಅಧ್ಯಕ್ಷ ದಿವ್ಯ ಶೆಟ್ಟಿ, ಉಳ್ಳಾಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಹರಿಯಪ್ಪ ಸಾಲಿಯಾನ್, ಹರೀಶ್ ಅಂಬ್ಲಮೊಗರು, ಸೋಮೇಶ್ವರ ಪುರಸಭೆ ಸದಸ್ಯರಾದ ಮೋಹನ್ ಶೆಟ್ಟಿ ಕುಂಪಲ, ಸ್ವಪ್ನ ಶೆಟ್ಟಿ, ಮನೋಜ್ ಕಟ್ಟೆಮನೆ, ಹರೀಶ್ ಕುಂಪಲ, ಸೋನಾ ಸುಭಾಷಿಣಿ, ಯಶವಂತ್ ಪ್ರಕಾಶ್ ನಗರ, ಜಯ ಪೂಜಾರಿ, ಅಮಿತಾ ಪೂಜಾರಿ, ಜಯಶ್ರೀ ಉಚ್ಚಿಲ್, ಬಿಜೆಪಿ ಮಂಡಲ ಕಾರ್ಯದರ್ಶಿ ರಾಜೇಶ್ ಜಾಲಹಿತ್ಲು, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಧನ್ಯವತಿ ಪೆರಿಬೈಲು, ಪ್ರಮುಖರಾದ ಮೋಹನ್ ದಾಸ್ ಶೆಟ್ಟಿ ಪೆಲತ್ತಡಿ,ಅರುಣ್ ಉಚ್ಚಿಲ್,ಚರಣ್ ತೊಕ್ಕೊಟ್ಟು, ಚೇತನ್ ಶೆಟ್ಟಿ ಕುಂಪಲ, ದೀಕ್ಷಿತ್ ನಿಸರ್ಗ, ಸೂರಜ್ ಸಾಗರ್ ಕುಂಪಲ, ಗಂಗಾಧರ ಗಟ್ಟಿ ಪಿಲಾರು, ಸವಿತ್ ಉಚ್ಚಿಲ್, ವಸಂತ್ ಕುಲಾಲ್, ರಾಜೇಶ್ ಗಟ್ಟಿ ಉಚ್ಚಿಲ, ನಿಶಾನ್ ಪೂಜಾರಿ, ಜಯರಾಮ್ ಪೂಜಾರಿ, ವರುಣ್ ರಾಜ್, ನೂತನ್ ರಾಜ್,ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಮಂಗಳೂರು ಮಂಡಲದ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ ಸ್ವಾಗತಿಸಿ, ನಿರೂಪಿಸಿದರು.



