November 6, 2026
Friday, November 6, 2026
spot_img

ಫಿಟ್ & ಫುಡ್ 06 | ಹೊಟೇಲ್ ಸ್ಟೈಲ್ ಪಾಲಕ್ ಪನೀರ್ ರೈಸ್ ಈಗ ಮನೆಯಲ್ಲೇ.. ಸಖತ್ ಟೇಸ್ಟಿ, ಸೂಪರ್ ಹೆಲ್ದಿ

ಏನೇನ್ ಬೇಕು?

ಅಕ್ಕಿ

ಪಾಲಕ್ ಸೊಪ್ಪು

ಪನೀರ್ ತುಂಡುಗಳು

ಈರುಳ್ಳಿ, ಟೊಮೆಟೊ

ಹಸಿಮೆಣಸಿನಕಾಯಿ, ಬೆಳ್ಳುಳ್ಳಿ

ಜೀರಿಗೆ, ಗರಂ ಮಸಾಲ, ಅರಿಶಿಣ, ಎಣ್ಣೆ, ಉಪ್ಪು

ಮಾಡೋದು ಹೇಗೆ ನೋಡಿಕೊಳ್ಳಿ

ಸ್ವಲ್ಪ ಬಿಸಿನೀರಿನಲ್ಲಿ ಪಾಲಕ್ ಸೊಪ್ಪು ಮತ್ತು ಹಸಿಮೆಣಸಿನಕಾಯಿಯನ್ನು 2 ನಿಮಿಷ ಹಾಕಿ ತೆಗೆದು, ತಣ್ಣಗಾದ ಬಳಿಕ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಪನೀರ್ ತುಂಡುಗಳನ್ನು ಹಗುರವಾಗಿ ಗೋಲ್ಡನ್ ಬ್ರೌನ್ ಬರುವವರೆಗೆ ಹುರಿದು ಪಕ್ಕಕ್ಕೆ ತೆಗೆದಿಟ್ಟುಕೊಳ್ಳಿ. ಅದೇ ಬಾಣಲೆಯಲ್ಲಿ ಜೀರಿಗೆ, ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಬಾಡಿಸಿ. ನಂತರ ಟೊಮೆಟೊ ಹಾಕಿ ಮೃದುವಾಗುವವರೆಗೂ ಬೇಯಿಸಿ. ಈಗ ರುಬ್ಬಿದ ಪಾಲಕ್ ಪ್ಯೂರಿ, ಗರಂ ಮಸಾಲ ಮತ್ತು ಉಪ್ಪು ಸೇರಿಸಿ 2 ನಿಮಿಷ ಎಣ್ಣೆ ಬಿಡುವವರೆಗೆ ಕುದಿಸಿ. ಬಳಿಕ ಬೇಯಿಸಿದ ಅನ್ನ ಹಾಗೂ ಹುರಿದ ಪನೀರ್ ಹಾಕಿ ಚೆನ್ನಾಗಿ ಕೈಯಾಡಿಸಿ. ಈಗ ಬಿಸಿಬಿಸಿಯಾದ ಪಾಲಕ್ ಪನೀರ್ ರೈಸ್ ಸವಿಯಲು ಸಿದ್ಧ!

ಇದನ್ನ ತಿಂದ್ರೆ ಏನ್ ಲಾಭ?

ಪಾಲಕ್‌ನಲ್ಲಿರುವ ವಿಟಮಿನ್ ‘ಎ’ ಮತ್ತು ಆಂಟಿಆಕ್ಸಿಡೆಂಟ್‌ಗಳು ಕಣ್ಣಿನ ದೃಷ್ಟಿಯನ್ನು ತೀಕ್ಷ್ಣಗೊಳಿಸುತ್ತವೆ.

ಕಬ್ಬಿಣಾಂಶ ರಕ್ತದ ಕಣಗಳನ್ನು ಹೆಚ್ಚಿಸಲು ಮತ್ತು ಸುಸ್ತು ದೂರ ಮಾಡಲು ಸಹಾಯ ಮಾಡುತ್ತದೆ.

ಪನೀರ್‌ನಲ್ಲಿ ಉತ್ತಮ ಗುಣಮಟ್ಟದ ಪ್ರೊಟೀನ್ ಇದ್ದು, ದೇಹದ ಶಕ್ತಿ ಮತ್ತು ಸ್ನಾಯುಗಳ ಬೆಳವಣಿಗೆಗೆ ಒಳ್ಳೆಯದು.

ಪಾಲಕ್ ಮತ್ತು ಪನೀರ್ ಎರಡರಲ್ಲೂ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳು ಮತ್ತು ಹಲ್ಲುಗಳು ಗಟ್ಟಿಯಾಗುತ್ತವೆ.

ಇದು ಫೈಬರ್ ಸಮೃದ್ಧವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಿ, ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.

Must Read

Skip to toolbar