November 6, 2026
Friday, November 6, 2026
spot_img

ದಾಂಡೇಲಿಯಲ್ಲಿ ಮಣ್ಣು ಕುಸಿದು ರೈಲ್ವೆ ತಾಂತ್ರಿಕ ಸಿಬ್ಬಂದಿ ಮೃತ್ಯು; ಮತ್ತೊಬ್ಬರಿಗೆ ಗಾಯ

ಹೊಸದಿಗಂತ ವರದಿ ಕಾರವಾರ:

ರೈಲ್ವೆ ಅಂಡರಬ್ರಿಡ್ಜ್ ಕಾಮಗಾರಿ ಸಂದರ್ಭದಲ್ಲಿ ತೆಗೆದು ರಾಶಿ ಹಾಕಿದ್ದ ಮಣ್ಣು ಏಕಾಏಕಿ ಕುಸಿದುಬಿದ್ದ ಪರಿಣಾಮ ಮಣ್ಣಿನ ಅಡಿ ಸಿಲುಕಿ ರೈಲ್ವೇ ಇಲಾಖೆಯ ತಾಂತ್ರಿಕ ಉದ್ಯೋಗಿ ಮೃತಪಟ್ಟು ಇನ್ನೋರ್ವ ಅಧಿಕಾರಿ ಗಾಯಗೊಂಡ ಘಟನೆ ದಾಂಡೇಲಿ ತಾಲೂಕಿನ ಬೇಡರ ಶಿರಗೂರು ಬಳಿ ಗುರುವಾರ ರಾತ್ರಿ ಸಂಭವಿಸಿದೆ.

ರೈಲ್ವೆ ಇಲಾಖೆಯಲ್ಲಿ ತಾಂತ್ರಿಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಿವಾಸಿ ಮಹೇಶ ಎಸ್ ತಳವಾರ್ (33)ಮೃತ ದುರ್ದೈವಿಯಾಗಿದ್ದು ಗದಗ ರಾಜೀವಗಾಂಧಿನಗರ ನಿವಾಸಿ ರೈಲ್ವೆ ಇಲಾಖೆಯ ಹಿರಿಯ ವಿಭಾಗೀಯ ಇಂಜಿನೀಯರ್ ಮಹ್ಮದ್ ಹುಸೇನ್ ಮುಲ್ಲಾ(57) ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೇಡರ ಶಿರಗೂರು ಬಳಿ ಬರ್ಜಿ ಕರ್ಕಾ ರಸ್ತೆಯಲ್ಲಿ ಅಂಡರ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿಗಾಗಿ ತೆಗೆದು ರಾಶಿ ಹಾಕಿದ್ದ ಮಣ್ಣು ಕುಸಿದು ಕೆಲಸದಲ್ಲಿ ನಿರತರಾಗಿದ್ದ ಸಿಬ್ಬಂದಿಗಳ ಮೇಲೆ ಬಿದ್ದ ಪರಿಣಾಮ ಅವಘಡ ಸಂಭವಿಸಿದೆ.
ಪೊಲೀಸ್ ಇಲಾಖೆಯ ಅಧಿಕಾರಿಗಳು,ಸಿಬ್ಬಂದಿಗಳು, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Must Read