November 12, 2026
Thursday, November 12, 2026
spot_img

ಆಲೂಗಡ್ಡೆ ಚಿಪ್ಸ್ ಬಿಟ್ಟು, ಸಂಜೆ ಸ್ನ್ಯಾಕ್ಸ್ ಗೆ ಈ ಹೆಲ್ದಿ ‘ಸಿಹಿ ಗೆಣಸಿನ ಚಿಪ್ಸ್’ ಟ್ರೈ ಮಾಡಿ

ಬೇಕಾಗುವ ಸಾಮಗ್ರಿಗಳು:

ಸಿಹಿ ಗೆಣಸು

ಎಣ್ಣೆ

ಉಪ್ಪು

ಖಾರದ ಪುಡಿ

ಮಾಡುವ ವಿಧಾನ

ಸಿಹಿ ಗೆಣಸನ್ನು ಚೆನ್ನಾಗಿ ತೊಳೆದು, ಮೇಲಿನ ಸಿಪ್ಪೆಯನ್ನು ತೆಳುವಾಗಿ ತೆಗೆಯಿರಿ. ಚಿಪ್ಸ್ ಸ್ಲೈಸರ್ ಬಳಸಿ ಗೆಣಸನ್ನು ತುಂಬಾ ತೆಳುವಾಗಿ ವೃತ್ತಾಕಾರದಲ್ಲಿ ಕತ್ತರಿಸಿ. ಹೆಚ್ಚಿದ ಹೋಳುಗಳನ್ನು ಒಂದು ಸ್ವಚ್ಛವಾದ ಬಟ್ಟೆಯ ಮೇಲೆ ಹರಡಿ, ಅದರಲ್ಲಿರುವ ತೇವಾಂಶ ಸಂಪೂರ್ಣವಾಗಿ ಒಣಗುವಂತೆ ಐದು ನಿಮಿಷ ಬಿಡಿ. ಒಂದು ಪಾತ್ರೆಯಲ್ಲಿ ಒಣಗಿದ ಗೆಣಸಿನ ಹೋಳುಗಳನ್ನು ಹಾಕಿ, ಅದಕ್ಕೆ ಸ್ವಲ್ಪ ಎಣ್ಣೆ, ಉಪ್ಪು ಮತ್ತು ಖಾರದ ಪುಡಿ ಹಾಕಿ ಎಲ್ಲೆಡೆ ಚೆನ್ನಾಗಿ ಹತ್ತುವಂತೆ ಕೈಯಿಂದ ಲೈಟಾಗಿ ಮಿಕ್ಸ್ ಮಾಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಮಧ್ಯಮ ಉರಿಯಲ್ಲಿ ಚಿಪ್ಸ್ ಅನ್ನು ಗರಿಗರಿಯಾಗುವವರೆಗೆ ಕರಿದು ತೆಗೆಯಿರಿ. ಈಗ ಬಿಸಿಬಿಸಿಯಾದ, ಗರಿಗರಿಯಾದ ಸಿಹಿ ಗೆಣಸಿನ ಚಿಪ್ಸ್ ಸವಿಯಲು ಸಿದ್ಧ!

Must Read

Skip to toolbar