ಸಾಮಾಗ್ರಿಗಳು
ಪನೀರ್ – 200 ಗ್ರಾಂ
ಮೈದಾ – 3 ಚಮಚ
ಕಾರ್ನ್ಫ್ಲೋರ್ – 3 ಚಮಚ
ಬ್ರೆಡ್ ಕ್ರಂಬ್ಸ್ – ಅರ್ಧ ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
ಖಾರದ ಪುಡಿ – ಅರ್ಧ ಚಮಚ
ಮೆಣಸಿನ ಪುಡಿ – ಕಾಲು ಚಮಚ
ಗರಂ ಮಸಾಲಾ – ಕಾಲು ಚಮಚ
ಅರಿಶಿನ ಪುಡಿ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯಕ್ಕೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ
ಮೊದಲು ಪನೀರ್ ಅನ್ನು ಸಣ್ಣ ಚೌಕಗಳಾಗಿ ಕತ್ತರಿಸಿಕೊಳ್ಳಿ.
ಒಂದು ಬಟ್ಟಲಿನಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಗರಂ ಮಸಾಲಾ, ಅರಿಶಿನ ಮತ್ತು ಉಪ್ಪು ಹಾಕಿ ಮಿಶ್ರಣ ಮಾಡಿ. ಇದಕ್ಕೆ ಪನೀರ್ ತುಂಡುಗಳನ್ನು ಸೇರಿಸಿ ಮಸಾಲೆ ಚೆನ್ನಾಗಿ ಮೆತ್ತಿಕೊಳ್ಳುವಂತೆ ಕಲಸಿ. ಸ್ವಲ್ಪ ಸಮಯ ಉಪ್ಪು ಖಾರ ಹಿಡಿಯಲು ಬಿಡಿ.
ಆನಂತರ ಮತ್ತೊಂದು ಬಟ್ಟಲಿನಲ್ಲಿ ಮೈದಾ, ಕಾರ್ನ್ಫ್ಲೋರ್ ಮತ್ತು ಸ್ವಲ್ಪ ನೀರು ಹಾಕಿ ತೆಳುವಾದ ಹಿಟ್ಟಿನ ಮಿಶ್ರಣ ತಯಾರಿಸಿ. ಮಸಾಲೆ ಹಾಕಿದ ಪನೀರ್ ತುಂಡುಗಳನ್ನು ಈ ಹಿಟ್ಟಿನಲ್ಲಿ ಅದ್ದಿ ಬ್ರೆಡ್ ಕ್ರಂಬ್ಸ್ನಲ್ಲಿ ಹೊರಳಿಸಿ. ಬಿಸಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಕರಿಯಿರಿ.
ಇದನ್ನು ಕೆಚಪ್ ಜೊತೆ ಸೇವಿಸಿದರೆ ಪನೀರ್ ಬೈಟ್ಸ್ ರೆಡಿ



