November 13, 2026
Friday, November 13, 2026
spot_img

ರುಚಿಯಲ್ಲೂ ನಂಬರ್ ಒನ್, ಆರೋಗ್ಯಕ್ಕೂ ಬೆಸ್ಟ್.. ಇಂದೇ ಟ್ರೈ ಮಾಡಿ ಬ್ಲೂ ಟೀ

ಬೇಕಾಗುವ ಸಾಮಗ್ರಿಗಳು:

ಶಂಖಪುಷ್ಪ ಹೂವು

ನೀರು

ನಿಂಬೆ ರಸ

ಜೇನುತುಪ್ಪ

ಪುದೀನಾ ಎಲೆ

ಮಾಡುವ ವಿಧಾನ

ಮೊದಲು ಪಾತ್ರೆಯಲ್ಲಿ ಒಂದು ಕಪ್ ನೀರನ್ನು ಕುದಿಯಲು ಇಡಿ. ನೀರು ಕುದಿಯಲು ಆರಂಭಿಸಿದ ತಕ್ಷಣ ಒಲೆಯನ್ನು ಆಫ್ ಮಾಡಿ, ಅದಕ್ಕೆ ಶಂಖಪುಷ್ಪದ ಹೂವುಗಳನ್ನು ಹಾಕಿ 3 ರಿಂದ 5 ನಿಮಿಷಗಳ ಕಾಲ ಮುಚ್ಚಿಡಿ. ನೀರು ಸುಂದರವಾದ ನೀಲಿ ಬಣ್ಣಕ್ಕೆ ತಿರುಗಿದಾಗ, ಹೂವುಗಳನ್ನು ಸೋಸಿ ನೀರನ್ನು ಕಪ್‌ಗೆ ಬಗ್ಗಿಸಿ. ಈಗ ಇದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ. ನಿಂಬೆ ರಸ ಸೇರಿಸಿದ ಕೂಡಲೇ ನೀಲಿ ಬಣ್ಣವು ಸುಂದರವಾದ ನೇರಳೆ ಬಣ್ಣಕ್ಕೆ ಬದಲಾಗುತ್ತದೆ. ಈಗ ನಿಮ್ಮ ಆರೋಗ್ಯಕರ ಹಾಗೂ ರುಚಿಕರವಾದ ಬ್ಲೂ ಟೀ ಸವಿಯಲು ಸಿದ್ಧ.

Must Read

Skip to toolbar