ಏನೇನ್ ಬೇಕು?
ಬ್ರೆಡ್
ಆವಕಾಡೊ
ಮೊಟ್ಟೆ
ನಿಂಬೆ ರಸ
ಉಪ್ಪು, ಪೆಪ್ಪರ್
ಬೆಣ್ಣೆ
ಚಿಲ್ಲಿ ಫ್ಲೇಕ್ಸ್
ಮಾಡೋದು ಹೇಗೆ ನೋಡಿಕೊಳ್ಳಿ
ಮೊದಲು ಬ್ರೆಡ್ ತುಂಡುಗಳನ್ನು ಕಾವಲಿ ಮೇಲೆ ಸ್ವಲ್ಪ ಬೆಣ್ಣೆ ಹಾಕಿ, ಎರಡೂ ಕಡೆ ಗೋಲ್ಡನ್ ಬ್ರೌನ್ ಬರುವವರೆಗೆ ಕ್ರಿಸ್ಪಿಯಾಗಿ ಟೋಸ್ಟ್ ಮಾಡಿ. ಒಂದು ಬೌಲ್ನಲ್ಲಿ ಅರ್ಧ ಆವಕಾಡೊ ತಿರುಳನ್ನು ಹಾಕಿ, ಅದಕ್ಕೆ ನಿಂಬೆ ರಸ, ಚಿಟಿಕೆ ಉಪ್ಪು ಮತ್ತು ಪೆಪ್ಪರ್ ಸೇರಿಸಿ ಚಮಚದಿಂದ ಚೆನ್ನಾಗಿ ಪೇಸ್ಟ್ ಮಾಡಿ. ನಿಮಗೆ ಇಷ್ಟವಾದಂತೆ ಮೊಟ್ಟೆಯನ್ನು ಆಮ್ಲೆಟ್ ಅಥವಾ ಬೇಯಿಸಿಕೊಳ್ಳಿ. ಟೋಸ್ಟ್ ಮಾಡಿದ ಬ್ರೆಡ್ ಮೇಲೆ ಮಾಡಿಟ್ಟ ಆವಕಾಡೊ ಪೇಸ್ಟನ್ನು ಚೆನ್ನಾಗಿ ಸವರಿ. ಅದರ ಮೇಲೆ ತಯಾರಿಸಿದ ಮೊಟ್ಟೆಯನ್ನು ಇರಿಸಿ. ಇದರ ಮೇಲೆ ಸ್ವಲ್ಪ ಚಿಲ್ಲಿ ಫ್ಲೇಕ್ಸ್ ಮತ್ತು ಉದುರಿಸಿದರೆ, ಬಾಯಲ್ಲಿ ನೀರೂರಿಸುವ ಆವಕಾಡೊ ಎಗ್ ಟೋಸ್ಟ್ ಸವಿಯಲು ಸಿದ್ಧ!
ಇದನ್ನ ತಿಂದ್ರೆ ಏನ್ ಲಾಭ?
ಆವಕಾಡೊದಲ್ಲಿ ಉತ್ತಮ ಕೊಬ್ಬುಗಳು ಇರುವುದರಿಂದ ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಇದರಲ್ಲಿ ಪ್ರೋಟೀನ್ ಮತ್ತು ಫೈಬರ್ ಅಧಿಕವಾಗಿರುವುದರಿಂದ, ಇದನ್ನು ತಿಂದರೆ ಹೊಟ್ಟೆ ತುಂಬಿದ ಅನುಭವ ಇರುತ್ತದೆ.
ಆವಕಾಡೊದಲ್ಲಿ ಕಣ್ಣಿನ ದೃಷ್ಟಿಯನ್ನು ಕಾಪಾಡುವ ಪೋಷಕಾಂಶಗಳಿದ್ದು, ಇದು ಕಣ್ಣಿನ ಪೊರೆ ಸಮಸ್ಯೆಯನ್ನು ತಡೆಯಲು ಸಹಕಾರಿ.
ಮೊಟ್ಟೆಯಲ್ಲಿರುವ ಪ್ರೋಟೀನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ದೇಹಕ್ಕೆ ಬೇಕಾದ ಇಂಧನವನ್ನು ನೀಡಿ ದಿನವಿಡೀ ಚೈತನ್ಯದಿಂದ ಇರುವಂತೆ ಮಾಡುತ್ತವೆ.



