ಹೊಸದಿಗಂತ ವರದಿ ವಿಜಯಪುರ:
ನಾನು ಅದನ್ನು ನೋಡಿ, ಇದನ್ನು ನೋಡಿ ಬರದ್ದೇನಿ. ಪುಸ್ತಕ ನಾನು ಬರದಿಲ್ಲ ಎನ್ನುವ ಬಸವ ಮಂಟಪ ಪುಸ್ತಕ ಲೇಖಕ ರವಿ ಹಂಜ್ ಕೊಚ್ಚಿಯಲ್ಲಿ ಬಂಧನ ಆಗಿದ್ದಾನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬಸವ ಮಂಟಪ ಪುಸ್ತಕ ವಿವಾದ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಾನು ಅಮೆರಿಕದಲ್ಲಿ ಇದ್ದೇನೆ, ನೀವು ಪ್ರತಿಭಟನೆ ಮಾಡ್ತಿದ್ದರೇ ನಾನು ಕರ್ನಾಟಕದಲ್ಲಿ ಇದ್ದುಕೊಂಡು ಉತ್ತರ ಕೊಡುತ್ತೇನೆ ಎಂದಿದ್ದ, ರವಿ ಹಂಜ್ ಭಂಡ ಇದಾನೆ ಎಂದು ಟೀಕಿಸಿದರು.
ಶಂಕರ ಬಿದರಿಗೆ ಪಾಟೀಲ ಕ್ಷಮೆ ಕೇಳುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಶಂಕರ ಬಿದರಿ ನನಗೆ ಆತ್ಮೀಯರು, ಆದರೆ, ನಾನು ಬೈಯದ್ದಿದ್ದು ಬಸವಣ್ಣರಿಗೆ ಅಪಮಾನ ಮಾಡಿದಕ್ಕೆ, ಇವರಿಗೆ ತಮಗೆ ಅಪಮಾನ ಆಗಿದ್ದು ಹತ್ತಿದೆ. ಆದರೆ, ಬಸವಣ್ಣನವರಿಗೆ ಆದ ಅಪಮಾನದ ಕುರಿತು ನೋವಾಗುತ್ತಿಲ್ಲ ಇವರಿಗೆ ಎಂದು ಟಾಂಗ್ ನೀಡಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನಾನು ಮತ್ತು ಅಧಿಕಾರಿಗಳು ಇಂದು ರಾತ್ರಿ ಜಪಾನ್‌ಗೆ ಹೋಗ್ತಾ ಇದೇವೆ. ಮೂರು ದಿನಗಳ ಕಾಲ ಜಪಾನ್ ಗೆ ಹೋಗುತ್ತಿದ್ದು, ಬಹಳಷ್ಟು ಜಪಾನ್ ಕಂಪನಿಗಳು ನಮ್ಮಲ್ಲಿ ಹೂಡಿಕೆ ಮಾಡುತ್ತೀವೆ ಎಂದರು.
ಬಂಡವಾಳ ಹೂಡಿಕೆಯಲ್ಲಿ ನಮ್ಮ ಕರ್ನಾಟಕ ನಂಬರ ಒನ್ ಸ್ಥಾನದಲ್ಲಿ ಬರಬೇಕು. ನಮ್ಮ ರಾಜ್ಯ ಮುಂದುವರಿದ ರಾಜ್ಯ ಆಗಬೇಕು ಎಂದರು.



