ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಬೆಂಗಳೂರಿನ ಪ್ರಸಿದ್ಧ ಉಪಾಹಾರ ಕೇಂದ್ರವಾದ ಮಲ್ಲೇಶ್ವರಂನ ಸೆಂಟ್ರಲ್ ಟಿಫಿನ್ ರೂಮ್ (CTR)ಗೆ ಭೇಟಿ ನೀಡಿದ್ದು, ಈ ಭೇಟಿಯ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗರದ ಹಳೆಯ ನೆನಪುಗಳು, ಸಾಂಪ್ರದಾಯಿಕ ಆಹಾರ ಹಾಗೂ ಫಿಲ್ಟರ್ ಕಾಫಿಯ ಸವಿಯ ನಡುವೆ ದೀಪಿಕಾ ಕೆಲ ಸಮಯ ಕಳೆದಿದ್ದು, ರೆಸ್ಟೋರೆಂಟ್ ಸಿಬ್ಬಂದಿಯೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದಾರೆ.
ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ CTR
ದೀಪಿಕಾ ಭೇಟಿ ನೀಡಿದ ಫೋಟೋವನ್ನು CTR ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ. ಫಿಲ್ಟರ್ ಕಾಫಿ ಕುಡಿಯುತ್ತಾ ಹಳೆಯ ಮಲ್ಲೇಶ್ವರಂ, ಹೂವಿನ ಮಾರುಕಟ್ಟೆ, ದೇವಸ್ಥಾನಗಳು ಹಾಗೂ ನಿಧಾನಗತಿಯ ಸುಂದರ ಬೆಳಗಿನ ದಿನಗಳ ಕುರಿತು ಮಾತುಕತೆ ನಡೆಸಿದ್ದಾಗಿ ರೆಸ್ಟೋರೆಂಟ್ ತನ್ನ ಪೋಸ್ಟ್ನಲ್ಲಿ ಬರೆದುಕೊಂಡಿದೆ. ದೀಪಿಕಾ ಮತ್ತೆ ತಮ್ಮ ಸಂಸ್ಥೆಗೆ ಭೇಟಿ ನೀಡಿರುವುದು ಸಂತೋಷ ತಂದಿದ್ದು, ಅವರ ಆತ್ಮೀಯತೆ ಮತ್ತು ಸಮಯ ನೀಡಿದಕ್ಕಾಗಿ ಧನ್ಯವಾದ ಸಲ್ಲಿಸಿದೆ.
ಇದನ್ನೂ ಓದಿ:
ಬೆಂಗಳೂರಿನ ನೆನಪುಗಳಿಗೆ ಮರಳಿದ ದೀಪಿಕಾ
ದೀಪಿಕಾ ಪಡುಕೋಣೆ ತಮ್ಮ ಬಾಲ್ಯ ಹಾಗೂ ಶಾಲಾ ದಿನಗಳ ಬಹುಭಾಗವನ್ನು ಬೆಂಗಳೂರಿನಲ್ಲಿ ಕಳೆದಿದ್ದಾರೆ. ನಗರದೊಂದಿಗಿನ ತಮ್ಮ ನಂಟು ಮತ್ತು ಇಲ್ಲಿನ ನೆನಪುಗಳ ಕುರಿತು ಅವರು ಹಲವು ಸಂದರ್ಭಗಳಲ್ಲಿ ಮಾತನಾಡಿದ್ದಾರೆ.
https://www.instagram.com/p/DgCT30TAtfj/?utm_source=ig_embed&ig_rid=ALFs7Nt3Vs3Grmu1gxtf5yM
1952ರಿಂದ ಬೆಂಗಳೂರಿಗರ ನೆಚ್ಚಿನ CTR
ಮಲ್ಲೇಶ್ವರಂನ ಸೆಂಟ್ರಲ್ ಟಿಫಿನ್ ರೂಮ್ 1952ರಿಂದ ಬೆಂಗಳೂರಿಗರಿಗೆ ಸಾಂಪ್ರದಾಯಿಕ ದಕ್ಷಿಣ ಭಾರತೀಯ ಉಪಾಹಾರವನ್ನು ನೀಡುತ್ತಿದೆ. ವಿಶೇಷವಾಗಿ ಬೆಣ್ಣೆ ಮಸಾಲೆ ದೋಸೆ ಹಾಗೂ ಫಿಲ್ಟರ್ ಕಾಫಿಗೆ ಈ ಹೋಟೆಲ್ ಪ್ರಸಿದ್ಧವಾಗಿದೆ.



