ಬೇಕಾಗುವ ಸಾಮಗ್ರಿಗಳು
ಬ್ರೆಡ್ ಸ್ಲೈಸ್
ಆಲೂಗಡ್ಡೆ
ಕಡಲೆಹಿಟ್ಟು
ಅಕ್ಕಿಹಿಟ್ಟು
ಖಾರದ ಪುಡಿ
ಅರಿಶಿಣ ಪುಡಿ
ಗರಂ ಮಸಾಲ
ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು
ಉಪ್ಪು
ಎಣ್ಣೆ
ಮಾಡುವ ವಿಧಾನ
ಸ್ಮಾಷ್ ಮಡಿದ ಆಲೂಗಡ್ಡೆಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಅರ್ಧ ಚಮಚ ಖಾರದ ಪುಡಿ, ಗರಂ ಮಸಾಲ ಮತ್ತು ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಒಂದು ಬ್ರೆಡ್ ಚೂರಿಗೆ ಆಲೂಗಡ್ಡೆ ಹೂರಣವನ್ನು ಸಮವಾಗಿ ಹಚ್ಚಿ, ಅದರ ಮೇಲೆ ಇನ್ನೊಂದು ಬ್ರೆಡ್ ಚೂರನ್ನು ಮುಚ್ಚಿ, ತ್ರಿಕೋನಾಕಾರದಲ್ಲಿ ಕತ್ತರಿಸಿ. ಬಟ್ಟಲಿನಲ್ಲಿ ಕಡಲೆಹಿಟ್ಟು, ಅಕ್ಕಿಹಿಟ್ಟು, ಉಳಿದ ಖಾರದ ಪುಡಿ, ಅರಿಶಿಣ ಮತ್ತು ಉಪ್ಪು ಹಾಕಿ, ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಗಂಟಿಲ್ಲದಂತೆ ಕಲಸಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಬ್ರೆಡ್ ತ್ರಿಕೋನಗಳನ್ನು ಕಡಲೆಹಿಟ್ಟಿನಲ್ಲಿ ಮುಳುಗಿಸಿ, ಬಿಸಿ ಎಣ್ಣೆಗೆ ನಿಧಾನವಾಗಿ ಬಿಡಿ. ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಗರಿಗರಿಯಾಗಿ ಕರಿದು ತೆಗೆಯಿರಿ. ಈಗ ಬಿಸಿಬಿಸಿ ಬ್ರೆಡ್ ಪಕೋಡವನ್ನು ಪುದೀನಾ ಚಟ್ನಿ ಅಥವಾ ಟೊಮೆಟೊ ಸಾಸ್ ಜೊತೆಗೆ ತಕ್ಷಣವೇ ಬಡಿಸಿ.



