ಏನೇನ್ ಬೇಕು ?
ಗೋಧಿ ಹಿಟ್ಟು
ಮೊಟ್ಟೆ
ಈರುಳ್ಳಿ
ಹಸಿಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
ಅರಿಶಿಣ, ಪೆಪ್ಪರ್
ಉಪ್ಪು
ಎಣ್ಣೆ
ಮಾಡೋದು ಹೇಗೆ ನೋಡಿಕೊಳ್ಳಿ
ಒಂದು ಬಟ್ಟಲಿನಲ್ಲಿ ಮೊಟ್ಟೆ, ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಅರಿಶಿಣ, ಪೆಪ್ಪರ್ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ. ನಾದಿದ ಹಿಟ್ಟಿನ ಉಂಡೆಯನ್ನು ತೆಗೆದುಕೊಂಡು ದುಂಡಗೆ ಪರೋಟ ಲಟ್ಟಿಸಿ. ಬಿಸಿ ತವಾ ಮೇಲೆ ಪರೋಟ ಹಾಕಿ ಎರಡೂ ಕಡೆ ಸ್ವಲ್ಪ ಎಣ್ಣೆ ಸವರಿ ಅರ್ಧ ಬೇಯಿಸಿ. ಬೇಯುತ್ತಿರುವ ಪರೋಟದ ಮೇಲೆ ಮೊಟ್ಟೆ ಮಿಶ್ರಣವನ್ನು ಹರಡಿ. ಎರಡೂ ಬದಿ ಹೊಂಬಣ್ಣ ಬರುವವರೆಗೆ ಬೇಯಿಸಿ, ಬಿಸಿಯಾಗಿ ಚಟ್ನಿ ಅಥವಾ ಮೊಸರಿನೊಂದಿಗೆ ಸವಿಯಿರಿ.
ಇದನ್ನ ತಿಂದ್ರೆ ಏನ್ ಲಾಭ?
ಮೊಟ್ಟೆ ಮತ್ತು ಗೋಧಿ ಸೇರಿ ದೇಹಕ್ಕೆ ಸತ್ವಯುತ ಶಕ್ತಿ ನೀಡುತ್ತವೆ. ದೀರ್ಘಕಾಲ ಹೊಟ್ಟೆ ತುಂಬಿದಂತೆ ಇಡುತ್ತವೆ.
ಮೊಟ್ಟೆಯಲ್ಲಿರುವ ಪ್ರೋಟೀನ್ ಮತ್ತು ಪೋಷಕಾಂಶಗಳು ಸ್ನಾಯುಗಳ ಬೆಳವಣಿಗೆ, ದಿನದ ಚುರುಕುತನಕ್ಕೆ ಸಹಕಾರಿ.
ಗೋಧಿ ಹಿಟ್ಟಿನ ನಾರಿನಂಶ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ.



