ಏನೇನ್ ಬೇಕು?
ಬ್ರೆಡ್ ಸ್ಲೈಸ್‌ಗಳು
ಆಲೂಗಡ್ಡೆ
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು
ಹಸಿ ಮೆಣಸಿನಕಾಯಿ
ಕಾಳುಮೆಣಸಿನ ಪುಡಿ
ಉಪ್ಪು
ಬೆಣ್ಣೆ
ಮಾಡುವ ವಿಧಾನ
ಒಂದು ಬೌಲ್‌ನಲ್ಲಿ ಸ್ಮಾಷ್ ಮಾಡಿದ ಆಲೂಗಡ್ಡೆ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಕಾಳುಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಬ್ರೆಡ್ ಸ್ಲೈಸ್‌ನ ಒಂದು ಬದಿಗೆ ಸ್ವಲ್ಪ ಬೆಣ್ಣೆ ಸವರಿ, ಅದರ ಮೇಲೆ ಆಲೂ ಮಿಶ್ರಣವನ್ನು ಸಮವಾಗಿ ಹರಡಿ. ತವಾ ಅಥವಾ ಟೋಸ್ಟರ್‌ನಲ್ಲಿ ಸ್ವಲ್ಪ ಬೆಣ್ಣೆ ಹಾಕಿ, ಆಲೂ ಹಚ್ಚಿದ ಬ್ರೆಡ್ ಅನ್ನು ಹೊಂಬಣ್ಣ ಬರುವವರೆಗೆ ಮತ್ತು ಗರಿಗರಿಯಾಗುವವರೆಗೆ ಕಾಯಿಸಿ. ಈಗ ಬಿಸಿಬಿಸಿಯಾಗಿರುವಾಗಲೇ ಚಹಾ ಅಥವಾ ಕಾಫಿಯ ಜೊತೆ ಸವಿಯಿರಿ.
ಇದನ್ನ ತಿಂದ್ರೆ ಏನ್ ಲಾಭ?
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿ.
ಆಲೂಗಡ್ಡೆ ದೇಹಕ್ಕೆ ತಕ್ಷಣದ ಶಕ್ತಿ ನೀಡುತ್ತದೆ, ಪೊಟ್ಯಾಷಿಯಂ ಮತ್ತು ಫೈಬರ್ ಅಂಶಗಳನ್ನು ಹೊಂದಿದೆ.
ಕೊತ್ತಂಬರಿ ಹಾಗೂ ಕಾಳುಮೆಣಸು ಜೀರ್ಣಕ್ರಿಯೆಗೆ ನೆರವಾಗುತ್ತವೆ ಮತ್ತು ರುಚಿಯನ್ನು ಹೆಚ್ಚಿಸುತ್ತವೆ.



