November 24, 2026
Tuesday, November 24, 2026
spot_img

ಕಾಫಿ ವಿತ್ ಕರಣ್: ದೀಪಿಕಾ ಪಡುಕೋಣೆಯ 8 ಗಂಟೆ ಕೆಲಸದ ಬೇಡಿಕೆ ಬೆಂಬಲಿಸಿದ ಕರಣ್ ಜೋಹರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್‌ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ನಟಿ ದೀಪಿಕಾ ಪಡುಕೋಣೆ ಅವರ ‘8 ಗಂಟೆಗಳ ಕೆಲಸದ ಶಿಫ್ಟ್’ ಬೇಡಿಕೆಗೆ ನಿರ್ಮಾಪಕ ಕರಣ್ ಜೋಹರ್ ಹಾಗೂ ನಟ ಅಕ್ಷಯ್ ಕುಮಾರ್ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ. ‘ಕಾಫಿ ವಿತ್ ಕರಣ್ ಸೀಸನ್ 9’ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿರುವ ಕರಣ್, ಚಿತ್ರರಂಗದಲ್ಲಿನ ಲಿಂಗ ತಾರತಮ್ಯವನ್ನು ಪ್ರಶ್ನಿಸಿದ್ದಾರೆ.

ಅಕ್ಷಯ್ ಶಿಸ್ತನ್ನು ಕೊಂಡಾಡಿದ ಕರಣ್

ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ್ದ ಅಕ್ಷಯ್ ಕುಮಾರ್ ಮತ್ತು ರವಿ ಕಿಶನ್ ಅವರೊಂದಿಗೆ ಮಾತನಾಡಿದ ಕರಣ್ ಜೋಹರ್, ಅಕ್ಷಯ್ ಅವರ ಸಮಯಪಾಲನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ಅಕ್ಷಯ್ ಬೆಳಗ್ಗೆ 5 ಗಂಟೆಗೆ ಮೀಟಿಂಗ್ ಮಾಡುತ್ತಾರೆ. ಸ್ಕ್ರಿಪ್ಟ್ ಅನ್ನು ಸಂಪೂರ್ಣವಾಗಿ ಸಿದ್ಧಪಡಿಸಿಕೊಂಡು ಬರುತ್ತಾರೆ. ನಿರ್ಮಾಪಕರ ಕಷ್ಟವನ್ನು ಅರ್ಥಮಾಡಿಕೊಂಡು ಹೊಸ ನಿರ್ದೇಶಕರಿಗೆ ಅವಕಾಶ ನೀಡುವ ಏಕೈಕ ಸೂಪರ್‌ಸ್ಟಾರ್ ಅವರು. ಆದರೆ ಅವರಿಗೆ ಸಿಗಬೇಕಾದಷ್ಟು ಕ್ರೆಡಿಟ್ ಸಿಗುತ್ತಿಲ್ಲ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೀಪಿಕಾ ಪರ ಕರಣ್ ಬ್ಯಾಟ್, ಅಕ್ಷಯ್ ಸಹಮತ

ದೀಪಿಕಾ ಪಡುಕೋಣೆ ಅವರ 8 ಗಂಟೆಗಳ ಕೆಲಸದ ಶಿಫ್ಟ್ ಬೇಡಿಕೆಯನ್ನು ಸಮರ್ಥಿಸಿಕೊಂಡ ಕರಣ್ ಜೋಹರ್, ಅದು ಅವರ ಸಂಪಾದಿತ ಹಕ್ಕು ಮತ್ತು ವೈಯಕ್ತಿಕ ಜೀವನದ ಭಾಗ ಎಂದು ಅಭಿಪ್ರಾಯಪಟ್ಟರು. ನಟರಿಗೆ ಸಿಗುವ ಸೌಲಭ್ಯ ನಟಿಯರಿಗೆ ನಿರಾಕರಿಸುವುದು ಲಿಂಗ ತಾರತಮ್ಯ ಎಂದು ಟೀಕಿಸಿದರು. ಇದಕ್ಕೆ ಅಕ್ಷಯ್ ಕುಮಾರ್ ಕೂಡ ದನಿಗೂಡಿಸಿದ್ದಾರೆ.

Must Read

Skip to toolbar